ಹಿಮಾಲಯನ್ ಧ್ಯಾನಯೋಗ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.24: ವಿಶ್ವಗುರು ಬಸವಣ್ಣನವರ 890ನೇ ಜಯಂತಿ ಮಹೋತ್ಸವ ನಿಮಿತ್ತ ನಗರದ ವುಂಕಿ ಮರಿಸಿದ್ದಮ್ಮ ಪ್ರಾಥಮಿಕ ಶಾಲೆಯಲ್ಲಿ 5.30 ರಿಂದ 6.30ರ ವರೆಗೆ ಹಿಮಾಲಯನ್ ಧ್ಯಾನಯೋಗವನ್ನು ಆಯೋಜಿಸಲಾಗಿತ್ತು.
ಬಸವೇಶ್ವರ ನಗರ ಯೋಗ ಕೇಂದ್ರದಲ್ಲಿ ಜಿಲ್ಲಾ ಪತಂಜಲಿ ಯೋಗಾಸಮಿತಿ ಮತ್ತು ರಾಷ್ಟ್ರೀಯ ಬಸವದಳ ಸಂಯುಕ್ತ ಆಶ್ರಯದಲ್ಲಿ ಶಿಬಿರವನ್ನು ಆಯೋಜಿಸಿದ್ದು ಶಿಬಿರವನ್ನು ಆಯೋಜಸಲಾಗಿತ್ತು.
ಆರು ವರ್ಷಗಳ ಕಾಲ ಯೋಗ ಸಾಧನೆಯನ್ನು ಹಿಮಾಲಯದಲ್ಲಿ ಮಾಡಿದ ಮಹಾಶರಣರಾದ ಪರಮಪೂಜ್ಯ ಶ್ರೀ ನಿರಂಜನ ಮಹಾಸ್ವಾಮಿಗಳು ನೂರು ಜನ ಯೋಗ ಸಾಧಕರಿಗೆ ಯೋಗ ಶಿಬಿರವನ್ನು ನಡೆಸಿಕೊಟ್ಟರು. ಶಿಬಿರದಲ್ಲಿ ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು ಮತ್ತು ಸದಸ್ಯರು  5 ಸಮಿತಿಗಳ ಅಧ್ಯಕ್ಷರು, ಗೌರವಾಧ್ಯಕ್ಷರು, ಮಾರ್ಗದರ್ಶಕರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಕೋಶಾಧಿಕಾರಿಗಳು, ಕೇಂದ್ರದ ಪ್ರಭಾರಿಗಳ ಪತಂಜಲಿ ಯೋಗ ಸಮಿತಿ,  ಭಾರತ್ ಸ್ವಾಭಿಮಾನ ಟ್ರಸ್ಟ್, ಯುವ ಭಾರತ್,  ಕಿಸಾನ್ ಸೇವಾ ಪಂಚಾಯತ್, ಮಹಿಳಾ ಪತಂಜಲಿ ಯೋಗ ಸಮಿತಿ ಬಳ್ಳಾರಿ ಮತ್ತು ವಿವಿಧ ಕೇಂದ್ರದ ಯೋಗ ಸಾಧಕರು ಮತ್ತು ಸಾಧಕೀಯರು ಶಿಬಿರದಲ್ಲಿ  ಭಾಗವಹಿಸಿದ್ದರು.
@12bc = ಸಂಜೆ ಆಧ್ಯಾತ್ಮಿಕ ಪ್ರವಚನ
ಸ್ಥಳೀಯ ಬಸವೇಶ್ವರ ನಗರದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ಸಂಜೆಯಿಂದ ಜೂ.2ರ ವರೆಗೆ ಪ್ರತಿದಿನ ರಾತ್ರಿ 7 ರಿಂದ 8ರ ವರೆಗೆ ಸಾಮೂಹಿಕ ಭಜನೆ, ಹಾಗೂ ಆಧ್ಯಾತ್ಮಿಕ ಪ್ರವಚನ ಜರುಗಲಿದ ಎಂದು ರಾಷ್ಟ್ರೀಯ ಬಸವದಳದ ಕೆ.ವಿ.ರವಿಶಂಕರ್ ತಿಳಿಸಿದ್ದಾರೆ.