ಹಿಮಾಚಲದಲ್ಲಿ ಶೈನ್ ಶೆಟ್ಟಿ ಬುಲೆಟ್ ರೈಡಿಂಗ್

ಬೆಂಗಳೂರು,ಏ.೧೭-ಸೀರಿಯಲ್,ಸಿನಿಮಾದಿಂದ ಬ್ರೇಕ್ ತಗೊಂಡಿರುವ ನಟ ಶೈನ್ ಶೆಟ್ಟಿ ಸದ್ಯಕ್ಕೆ ಹಿಮಾಚಲ ಪ್ರದೇಶದ ಪ್ರವಾಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಬುಲೆಟ್‌ನಲ್ಲಿ ಏಕಾಂಗಿ ಪ್ರವಾಸ ಕೈಗೊಂಡಿರುವ ನಟ ಶೈನ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದು, ರೀಲ್ ಹಿಂದೆ ಕೆಲವು ನೈಜತೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಬುಲೆಟ್‌ನಲ್ಲಿ ಹಿಮಾಚಲ ಪ್ರದೇಶ ಸುತ್ತುತ್ತಿರುವ ಶೈನ್ ಶೆಟ್ಟಿ ಅಲ್ಲಿನ ಜನರ ಜೊತೆ ಬೆರೆತು ಅವರ ನಡೆ ನುಡಿಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಸದ್ಯ ಶೈನ್ ಹಂಚಿಕೊಂಡಿರುವ ಫೋಟೋಗಳಿಗೆ ೧೦ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಸೂಪರ್ ಅಣ್ಣ, ಸೋಲೋ ಟ್ರಿಪ್ಪಾ ಎಂದೆಲ್ಲಾ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಶೈನ್ ಶೆಟ್ಟಿ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿನ ಚಂದು ಪಾತ್ರದಿಂದ ತುಂಬಾ ಪ್ರಸಿದ್ಧಿ ಪಡೆದರು. ಇದಾದ ಬಳಿಕ ಎರಡು ವರ್ಷಗಳ ಕಾಲ ಸೀರಿಯಲ್‌ನಲ್ಲಿ ನಟಿಸಿ ನಂತರ ಚಿತ್ರರಂಗದಲ್ಲಿ ನಾಯಕನಾಗಬೇಕೆಂದು ಸೀರಿಯಲ್ ತೊರೆದರು. ಸ್ವಲ್ಪ ದಿನ ಹಿಮಾಲಯಕ್ಕೂ ಹೋಗಿ ಬಂದರು. ಬಳಿಕ ಜೀವನ ಯಜ್ಞ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದರು. ಆದರೆ ಚಿತ್ರ ಯಶಸ್ವಿಯಾಗಲಿಲ್ಲ. ಅಷ್ಟೋತ್ತಿಗಾಗಲೇ ಸ್ವಲ್ಪ ಸಾಲ ಮಾಡಿಕೊಂಡಿದ್ದ ಶೈನ್‌ಗೆ ಕಿರುತೆರೆ ಮರಳಿ ಕರೆಯಿತಾದರೂ ಹೋಗಲಿಲ್ಲ.
ನಂತರ ಶೈನ್ ತಮ್ಮ ತಂದೆಯ ಸ್ನೇಹಿತರಿಂದ ಸಾಲ ಪಡೆದು ‘ಗಲ್ಲಿ ಕಿಚನ್ ಎಂಬ ಹೆಸರಿಟ್ಟು ಮೊಬೈಲ್ ಕ್ಯಾಂಟೀನ್ ತೆರೆದರು. ಈಗ ಇದೇ ಅಂಗಡಿ ದೊಡ್ಡ ಗಲ್ಲಿ ಕಿಚನ್ ಆಗಿ ಬೆಳೆದಿದೆ.