ಹಿಮಾಚಲದಲ್ಲಿ ಭಾರೀ ಹಿಮಪಾತ

ಇಟಾನಗರ, ಜ. ೩-ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮನಾಲಿಯಲ್ಲಿ ಭಾರಿ ಹಿಮಪಾತದ ಹಿನ್ನೆಲೆಯಲ್ಲಿ ೫೦೦ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ.
ಪ್ರಮುಖವಾಗಿ ಅಟಲ್ ಸುರಂಗ ಮತ್ತು ಸೋಲಾಂಗ್ ನಲ್ಲಾ ನಡುವಿನ ರಸ್ತೆಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ತೊಂದರೆ ಎದುರಾಗಿದ್ದು, ರಕ್ಷಣಾ ಕಾರ್ಯಾಚರಣೆ ಚಾಲ್ತಿಯಲ್ಲಿದ್ದ ಎಂದು ತಿಳಿದು ಬಂದಿದೆ.
ರಾತ್ರಿ ಸುಮಾರು ೮ರ ಹೊತ್ತಿಗೆ ೨೦ಕ್ಕೂ ಹೆಚ್ಚು ಸಾಗಾಟ ವಾಹನಗಳೊಂದಿಗೆ ರಕ್ಷಣಾ ತಂಡವು ಸ್ಥಳವನ್ನು ತಲುಪಿದೆ. ಸಿಕ್ಕಿಬಿದ್ದವರ ಸ್ಥಳಾಂತರಕ್ಕಾಗಿ ೪೮ ಆಸನ ಗಳ ಬಸ್ ಕೂಡಾ ಕುಲಾಂಗ್‌ಗೆ ರವಾನಿಸಲಾಗಿದೆ. ಎಂದು ಮನಾಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ರಾಮನ್ ಘರ್‌ಸಂಗಿ ತಿಳಿಸಿದ್ದಾರೆ.
ಇಂದಿನಿಂದ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆಗೆ ಸಾಧ್ಯತೆ ಇದ್ದು, ಏತನ್ಮಧ್ಯೆ ಹಿಮಾಚಲ ಪ್ರದೇಶದಲ್ಲಿ ‘ಯಲ್ಲೋ ಅಲರ್ಟ್’ ನೀಡಿರುವ ಹವಾಮಾನ ಇಲಾಖೆ, ಭಾರಿ ಹಿಮಪಾತ ಉಂಟಾಗುತ್ತದೆ ಎಂದು ತಿಳಿಸಿದೆ.