ಹಿಮಾಚಲದಲ್ಲಿ ನಾಳೆ ಮತದಾನ

ನವದೆಹಲಿ,ನ..೧೧- ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಸಿದ್ದಪಡಿಸಿಕೊಂಡಿದ್ದ ಅಪಾರ ಪ್ರಮಾಣದ ನಗದು, ಮದ್ಯ ಮತ್ತು ಇನ್ನಿತರೆ ವಸ್ತುಗಳನ್ನು “ದಾಖಲೆ ದಾಖಲೆ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಹಿಮಾಚಲ ಪ್ರದೇಶದಲ್ಲಿ ನಾಳೆ ಮತದಾನ ನಡೆಯಲಿದೆ. ಗುಜರಾತ್‌ನಲ್ಲಿ ಡಿಸೆಂಬರ್ ೧ ಮತ್ತು ೫ ರಂದು ಮತದಾನ ನಡೆಯಲಿದೆ.
೨೦೧೭ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಹಿಮಾಚಲ ಪ್ರದೇಶದಲ್ಲಿ ಐದು ಪಟ್ಟು ನಗದು, ಚಿನ್ನಾಭರಣ ಸೇರಿದಂತೆ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಚುನಾವಣೆಗೆ ಮುನ್ನ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ಆಯೋಗದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಕೈಗೊಂಡ ಕ್ರಮಗಳಿಂದ ಅಪಾರ ಪ್ರಮಾಣದ ಮದ್ಯ ,ನಗದು ವಶಪಡಿಸಿಕೊಳ್ಳಲಾಗಿದೆ.
ಚುನಾವಣೆ ಘೋಷಣೆಯಾದ ಕೆಲವೇ ದಿನದಿಂದ ಇಲ್ಲಿಯವರೆಗೆ ೭೧.೮೮ ಕೋಟಿ ರೂ.ಗಳ ನಗದು ವಶಪಡಿಸಿಕೊಳ್ಳಲಾಗಿದೆ. ೨೦೧೭ ರ ವಿಧಾನಸಭೆ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯ ಸಂಪೂರ್ಣ ಅವಧಿಯಲ್ಲಿ ೨೭.೨೧ ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿತ್ತು
ಹಿಮಾಚಲ ಪ್ರದೇಶದಲ್ಲಿ ಮೊತ್ತ ೫೦.೨೮ ಕೋಟಿ ರೂ. ನಗದು ವಶಪಡಿಸಿಕೊಂಡಿದ್ದು ೧೦೦ ಕೋಟಿಗೂ ಅಧಿಕ ಮೊತ್ತದ ಉಡುಗೊರೆ ಸೇರಿದೆ ಎಂದು ತಿಳಿಸಿದೆ.