ಹಿನಕಲ್ ಗ್ರಾಮವನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವುದಕ್ಕೆ ನಮ್ಮ ಆಕ್ಷೇಪವಿಲ್ಲ

ಮೈಸೂರು,ನ.3: ಹಿನಕಲ್ ಗ್ರಾಮವನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹಿನಕಲ್ ಗ್ರಾಮದ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿನಕಲ್ ಗ್ರಾಮಸ್ಥರು ಹಿನಕಲ್ ಗ್ರಾಮವನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಅಭಿವೃದ್ಧಿಯ ದೃಷ್ಟಿಯಿಂದ ಮೊದಲು ಗ್ರಾಮಗಳಿಗೆ ಅನುದಾನ ಮೀಸಲಿರಿಸಿ ನಂತರ ಪಾಲಿಕೆ ವ್ಯಾಪ್ತಿಗೆ ಸೇರಿಸುವಂತೆ ಮನವಿ ಮಾಡಿದರು. ಮೊದಲು ಸಚಿವ ಸಂಪುಟದಲ್ಲಿ ಗ್ರಾಮಗಳಿಗೆ ಅನುದಾನ ಮೀಸಲಿರಿಸಿದರೆ ಅಭಿವೃದ್ಧಿ ದೃಷ್ಟಿಯಿಂದ ಅನುಕೂಲವಾಗಲಿದೆ. ಈಗಲೇ ಪಾಲಿಕೆ ವ್ಯಾಪ್ತಿಗೆ ಸೇರಿಸಲು ಮುಂದಾದರೆ ಅತ್ತ ಸಂಪೂರ್ಣವಾಗಿ ಪಾಲಿಕೆ ವ್ಯಾಪ್ತಿಗೂ ಸೇರದೇ ಇತ್ತ ಪಂಚಾಯಿತಿ ವ್ಯಾಪ್ತಿಗೂ ಸೇರದೇ ಅತಂತ್ರವಾಗಲಿದೆ. ಮುಂದಿನ ಪಾಲಿಕೆ ಚುನಾವಣೆಗೆ ಇನ್ನೂ ಮೂರೂವರೆ ವರ್ಷಗಳ ಸಮಯಾಕಾಶವಿದೆ. ಪಾಲಿಕೆ ವ್ಯಾಪ್ತಿಗೆ ಹಿನಕಲ್ ಗ್ರಾಮವನ್ನು ಸೇರಿಸುವುದಾದರೆ ಮುಂದಿನ ಪಾಲಿಕೆ ಚುನಾವಣೆ ವೇಳೆಗೆ ಸೇರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು, ಸರ್ಕಾರಕ್ಕೆ ಮನವಿ ಮಾಡಿದರು.