ಹಿಟ್ & ರನ್ ಪ್ರಕರಣ: ಇಬ್ಬರು ಯುವಕರು ಧಾರುಣ ಸಾವು

ಕೆ.ಆರ್.ಪೇಟೆ. ಜೂ.19:- ತಾಲ್ಲೂಕಿನ ಚನ್ನರಾಯಪಟ್ಟಣ-ಮೈಸೂರು ಮುಖ್ಯ ರಸ್ತೆಯ ಹಿರೀಕಳಲೆ ಗ್ರಾಮದ ಬಳಿ ಹಿಟ್ & ರನ್ ಪ್ರಕರಣದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಧಾರುಣ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಹಿರೀಕಳಲೆ ಗ್ರಾಮದ ಸಂದೇಶ್ ಮತ್ತು ಮರಡಹಳ್ಳಿ ಗ್ರಾಮದ ಭರತ್ ಮೃತ ದುರ್ದೈವಿಗಳು.
ಎಳನೀರು ವ್ಯಾಪಾರ ಮಾಡಿಕೊಂಡು ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದ ಯುವಕರು ವ್ಯಾಪಾರ ಮುಗಿಸಿಕೊಂಡು ಭಾನುವಾರ ರಾತ್ರಿ ಸುಮಾರು 10ಗಂಟೆ ಸಮಯದಲ್ಲಿ ಕೆ.ಆರ್.ಪೇಟೆ ಕಡೆಯಿಂದ ಹಿರಿಕಳಲೆ ಗ್ರಾಮಕ್ಕೆ ತಮ್ಮ ಪಲ್ಸರ್ ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸ್ಥಳ ಪರಿಶೀಲನೆ ನಡೆಸಿರುವ ಕಿಕ್ಕೇರಿ ಪೆÇೀಲೀಸರು ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ ಅಫಘಾತ ನಡೆಸಿ ಪರಾರಿಯಾಗಿರುವ ವಾಹನ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಘಟನೆ ಕುರಿತು ಕಿಕ್ಕೇರಿ ಪೆÇೀಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚನ್ನರಾಯಪಟ್ಟಣ-ಮೈಸೂರು ಮುಖ್ಯ ರಸ್ತೆಯಲ್ಲಿರುವ ಬಹುತೇಕ ಮನೆಗಳು ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ ಆದ್ದರಿಂದ ಅಗತ್ಯ ಇರುವ ಕಡೆ ಪರಿಶೀಲನೆ ನಡೆಸಿ ಅಫಘಾತ ನಡೆಸಿದ ವಾಹನವನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಜರುಗಿಸುವುದರ ಜೊತೆಗೆ ಮೃತರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಹಿರೀಕಳಲೆ,ಮರಡಹಳ್ಳಿ ಹಾಗೂ ಕೆ.ಆರ್.ಪೇಟೆ ನಾಗರೀಕರು ಪೆÇೀಲೀಸ್ ಅಧಿಕಾರಿಗಳನ್ನು ಒತ್ತಾಯ ಮಾಡಿದ್ದಾರೆ.