ಹಿಟ್ & ರನ್ ಕಾಯ್ದೆ ವಿರೋಧಿಸಿ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಸಿಂಧನೂರು.ಜ.೧೬- ಟಿ.ಯು.ಸಿ.ಐ ವತಿಯಿಂದ ರಾಜ್ಯಾದ್ಯಂತ ನಾಳೆ ನಡೆಯುವ ಲಾರಿ ಮಾಲಿಕರು ಮತ್ತು ಚಾಲಕರು ,ಕ್ಲೀನರ್ ಒಳಗೊಂಡು ಕೇಂದ್ರ ಸರ್ಕಾರ ಜಾರಿಗೆ ತಂದ ಹಿಟ್ & ರನ್ ಕೇಸ್ ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತದೆಂದು ಪ್ರತಿಯೊಬ್ಬರೂ ಭಾಗವಹಿಸಿ ಎಂದು ಸಂಘಟನೆ ಮುಖಂಡರಾದ ಬಿ ಲಿಂಗಪ್ಪ ಮನವಿ ಮಾಡಿಕೊಂಡರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೊಷ್ಟಿ ಉದ್ದೇಶಿಸಿ ಮಾತನಾಡುತ್ತಾ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಿಟ್‌ರನ್ ಕಾಯ್ದೆ ಲಾರಿ ಚಾಲಕರಿಗೆ ಮಾರಕ ಆ ಕಾರಣದಿಂದ ಅದನ್ನು ಕೂಡಲೇ ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿ ಇಡೀ ರಾಜ್ಯಾದ್ಯಂತ ನಾಳೆ ಬುದುವಾರ ಟಿ.ಯು.ಸಿ.ಐ ಸಹಯೋಗದಲ್ಲಿ ಲಾರಿ ಸಂಘಟನೆ ಒಳಗೊಂಡು ಲಾರಿ ಮಾಲಿಕರು, ಚಾಲಕರು, ಕ್ಲೀನರ್ ಸೇರಿ ಅದರ ಭಾಗವಾಗಿ ತಾಲೂಕ ಸಮಿತಿ ವತಿಯಿಂದ ನಗರದ ಎಪಿಎಂಸಿ ಯ ಗಣೇಶ ದೇವಸ್ಥಾನದಿಂದ ಬೆಳಿಗ್ಗೆ ೧೦-೩೦ ರಿಂದ ಮೆರವಣಿಗೆ ಪ್ರಾರಂಭವಾಗಿ ತಹಶಿಲ್ದಾರ ಮೂಲಕ ಮನವಿಯನ್ನು ಸಲ್ಲಿಸುತ್ತೆವೆ.
ಆ ಕಾರಣದಿಂದ ಪ್ರತಿಯೊಬ್ಬರೂ ಯಾವುದೇ ಲಾರಿಗಳನ್ನು ರಸ್ತೆಗೆ ಇಳಿಸದೆ ಈ ಕಾಯ್ದೆ ಖಂಡಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಬೇಕೆಂದು ವಿನಂತಿಸಿದರು.
ಅಬ್ದುಲ್ ಘನಿ, ಅಪ್ಪು ಪಾಟೀಲ್, ಯಂಕಪ್ಪ ಕೆಂಗಲ್, ಮುರ್ತುಜಸಾಬ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.