ಹಿಂಸಾಪೀಡಿತ ಮಣಿಪುರಕ್ಕೆ ರಾಹುಲ್ ಭೇಟಿ

ನವದೆಹಲಿ,ಜೂ.೨೯- ಹಿಂಸಾಚಾರ ಪೀಡಿತ ಮಣಿಪುರಕ್ಕೆ ಇಂದಿನಿಂದ ಎರಡು ದಿನಗಳ ಪ್ರವಾಸ ಕೈಗೊಳ್ಳಲಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜನಾಂಗೀಯ ಘರ್ಷಣೆಯಿಂದ ಹಿಂಸಾಚಾರದಿಂದ ನಿರಾಶ್ರಿತರ ಶಿಬಿರಗಳಲ್ಲಿ ಇರುವ ಜನರೊಂದಿಗೆ ಸಂವಾದ ನಡೆಸಲಿದ್ಧಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ಮತ್ತೆ ಸ್ಥಾಪನೆಯಾಗುವ ಅಗತ್ಯವಿದೆ. ಇದುವರೆಗೆ ಮಣಿಪುರದಲ್ಲಿ ನಡೆದ ಘಟನೆ
ಮಾನವೀಯ ದುರಂತವಾಗಿದ್ದು, ಜನರಿಗೆ ಪ್ರೀತಿ ಬಿತ್ತಬೇಕೋ ಹೊರತು ದ್ವೇಷವನ್ನಲ್ಲ ಎಂದು ಹೇಳಿದ್ದಾರೆ.ರಾಹುಲ್ ಗಾಂಧಿ ಅವರ ಎರಡು ದಿನಗಳ ರಾಜ್ಯ ಭೇಟಿಯ ಸಮಯದಲ್ಲಿ ಇಂಫಾಲ್ ಮತ್ತು ಚುರಚಂದಪುರದಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮಣಿಪುರದಲ್ಲಿ ಮೇ ೩ ರಂದು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಮೇಥೈ ಸಮುದಾಯವನ್ನು ಸೇರಿಸುವ ಬೇಡಿಕೆ ಪ್ರತಿಭಟಿಸಲು ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ ಆಯೋಜಿಸಿದ್ದ ರ್ಯಾಲಿಯಲ್ಲಿ ಘರ್ಷಣೆಗಳು ಉಂಟಾದ ನಂತರ ಹಿಂಸಾಚಾರ ಭುಗಲೆದ್ದಿತ್ತುಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಎರಡು ದಿನಗಳ ಕಾಲ ಇಂದಿನಿಂದ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ.ಭೇಟಿಯ ಸಂದರ್ಭದಲ್ಲಿ ಇಂಫಾಲ ಮತ್ತು ಚುರಚಂದಪುರದ ಪ್ರತಿನಿಧಿಗಳು. ಮಣಿಪುರದ ವಿವಿಧ ನಾಗರಿಕ ಸಮುದಾಯಗಳೋಂದಿದೆ ಸಂವಾದ ನಡೆಸಲಿದ್ದಾರೆ ಎಂದಿದ್ಧಾರೆ.
ಶಾಂತಿ ಕಾಪಾಡಲು ಮನವಿ:
ಮಣಿಪುರದಲ್ಲಿ ಶಾಂತಿ ಕಾಪಾಡುವಂತೆ ಮಾಜಿ ಮುಖ್ಯಮಂತ್ರಿ ಹಾಗು ಕಾಂಗ್ರೆಸ್ ನಾಯಕ ಒಕ್ರಾಮ್ ಇಬೋಬಿ ಸಿಂಗ್ ಮನವಿ ಮಾಡಿದ್ದಾರೆ.ರಾಹುಲ್ ಗಾಂಧಿಯವರ ಎರಡು ದಿನಗಳ ಮಣಿಪುರ ಭೇಟಿಯ ಸಂದರ್ಭದಲ್ಲಿ ಜನರು ಶಾಂತಿ ಕಾಪಾಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.ಹಿಂಸಾಚಾರವನ್ನು ನಿಭಾಯಿಸಿದ ಬಗ್ಗೆ ಕೇಂದ್ರ ಮತ್ತು ಮಣಿಪುರ ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳ ವಿರುದ್ಧ ದಾಳಿ ನಡೆಸಿರುವ ಅವರು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿದ್ದಾರೆ.