ಹಿಂಸಾಚಾರ, ಮನೆ ಸೇರಲು ಬಾಲಕ ಪರದಾಟ

ಗುವಾಹಟಿ,ಮೇ. ೧೧- ಮಣಿಪುರದಲ್ಲಿ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಉದಯೋನ್ಮುಖ ಬಾಕ್ಸರ್ ಬಾಲಕನೊಬ್ಬ ಮನೆ ಸೇರಲು ಪರದಾಡಿದ ಘಟನೆ ನಡೆದಿದೆ.
ಕೇವಲ ತನ್ನ ಬಾಕ್ಸಿಂಗ್ ಕೈಗವಸುಗಳನ್ನು ಹಿಡಿದುಕೊಂಡು, ೭ ನೇ ತರಗತಿಯ ವಿದ್ಯಾರ್ಥಿ ಮೇ ೮ ರಂದು ಇಂಫಾಲ್ ಪಶ್ಚಿಮ ಜಿಲ್ಲೆಯ ಮಂತ್ರಿಪುಖ್ರಿಯಲ್ಲಿ ಅಸ್ಸಾಂ ರೈಫಲ್ಸ್ ಶಿಬಿರ ತಲುಪಲು ೧೫ ಕಿ.ಮೀ ಓಡಿದ ಘಟನೆ ನಡೆದಿದೆ.
ಮಣಿಪುರದಲ್ಲಿ ನಡೆದಿರುವ ಹಿಂಸಾಚಾರ ಬಾಲಕನಿಗೆ ಸಂಕಷ್ಟ ತಂದೊಂಡಿದ್ದೆ. ಪೋಷಕರಿಂದ ಬೇರ್ಪಟ್ಟ ಬಾಲಕ ಮನೆ ಸೇರಲು ಕಾಡು ಮೇಡಿನಲ್ಲಿ ಓಡಿ ಪರದಾಡುವಂತಾಗಿದೆ.
ಜನಾಂಗೀಯ ಘರ್ಷಣೆಗಳು ಭುಗಿಲೆದ್ದ ಹಿನ್ನೆಲೆಯಲ್ಲಿ ಮಣಿಪುರ ಹಿಂಸಾಚಾರದ ತಾಣವಾಗಿ ಬಿಂಬಿತವಾಗಿದೆ. ಇಂಫಾಲ್‌ನ ಉತ್ತರ ಜಿಲ್ಲೆಯ ಕಾಂಗ್‌ಪೋಕ್ಪಿಯಲ್ಲಿರುವ ಸೈಕುಲ್ ಎಂಬ ತಮ್ಮ ಸ್ಥಳೀಯ ಹಳ್ಳಿಯಲ್ಲಿ ಅಡಗಿಕೊಂಡಿದ್ದ ಬಾಲಕ ತನ್ನ ಪೋಷಕರಿಂದ ಬೇರ್ಪಟ್ಟು ಸಮಸ್ಯೆ ಎದುರಿಸುವಂತಾಗಿದೆ.
ಆತಂಕದ ನಾಲ್ಕು ದಿನಗಳ ಕಾಲ ತನ್ನ ಹಾಸ್ಟೆಲ್‌ನಲ್ಲಿ ಸಿಲುಕಿ ಕೊಂಡಿದ್ದ ಮಂಗ್ಮಿನ್ಮ್ಗಮ್ ಮನೆಗೆ ಹೋಗಲು ನಿರ್ಧರಿಸಿದ್ದಾನೆ. ಮಣಿಪುರದ ದಟ್ಟವಾದ ಕಾಡುಗಳು ಮತ್ತು ರೋಲಿಂಗ್ ಬೆಟ್ಟಗಳ ಹಚ್ಚ ಹಸಿರಿನ ಮೂಲಕ ಅಪಾಯಕಾರಿ ಪ್ರಯಾಣ ಮಾಡುವುದು ಕಷ್ಟಕರವಾಗದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಬಾಲಕ “ನಾನು ಎಷ್ಟು ದೂರ ಓಡಿದೆ ಎಂದು ನನಗೆ ತಿಳಿದಿಲ್ಲ. ಇದು ಹಗಲು ರಾತ್ರಿ ಎನ್ನದೆ ಜೋಜ ಕೈಯಲ್ಲಿಡಿದು ಓಡಿಹೋದೆ” ಎಂದು ಮಾಂಗ್ಮಿನ್ಮ್ಗಮ್ ಹೇಳಿದ್ದಾರೆ.
ಭದ್ರತಾ ಪಡೆಗಳು ಅವನನ್ನು ಮನೆಗೆ ಕರೆತಂದ ನಂತರ ಅವರ ತಂದೆ ಶ್ಯಾಮ್ ಲೈರಕ್ಲಕ್ಥಮ್, ಮೈಟೈ ರೈತ ಮತ್ತು ತಾಯಿ ಹತ್ನು ಆಶ್ಚರ್ಯ ಮತ್ತು ಸಂತೋಷಪಟ್ಟರು.
೬೦ ಕ್ಕೂ ಹೆಚ್ಚು ಜನರನ್ನು ಕೊಂದ ಮತ್ತು ೩೫,೦೦೦ ಜನರನ್ನು ಸ್ಥಳಾಂತರಿಸಿದ ಮೈಟಿ-ಕುಕಿ ಘರ್ಷಣೆಗಳ ಅವಶೇಷಗಳಿಂದ ಹುಟ್ಟುವ ಭರವಸೆಯ ಸಂಕೇತವೆಂದು ಪ್ರಶಂಸಿಸಲಾಗಿದೆ. ಮಣಿಪುರದ ಎಲ್ಲಾ ಸಮುದಾಯಗಳ ಶಾಂತಿಯುತ ಸಹಬಾಳ್ವೆಗೆ ಸಾಕ್ಷಿಯಾಗಿದೆ.