ಹಿಂಸಾಚಾರಕ್ಕೆ ಬಿಜೆಪಿ ಯತ್ನ; ಬಘೇಲ್ ಆರೋಪ

ರಾಯ್‌ಪುರ,ಮೇ.೧೮-ಉಗ್ರಗಾಮಿಗಳನ್ನು ಹುಟ್ಟುಹಾಕಿ ಬಿಜೆಪಿ ಹಿಂಸಾಚಾರಕ್ಕೆ ಮುಂದಾಗಿದೆ ಎಂದು ಛತ್ತೀಸ್‌ಘಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ತೀವ್ರ ಆರೋಪಿಸಿದ್ದಾರೆ.
ಬಿಜೆಪಿ ನಾಯಕರು ಉಗ್ರಗಾಮಿಗಳನ್ನು ಸೃಷ್ಟಿಸಲು ಬಯಸುತ್ತಾರೆ, ಹಿಜಾಬ್ ಸೇರಿದಂತೆ ಮತ್ತಿತರ ವಿಷಯವನ್ನು ಮುಂದೆ ತಂದು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಾರೆ ಎಂದು ದೂರಿದ್ದಾರೆ.
ಕರ್ನಾಟಕದಲ್ಲಿ ಹಿಜಾಬ್ ವಿವಾದವನ್ನು ಹುಟ್ಟುಹಾಕಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಕರ್ನಾಟಕ ಕದನದಲ್ಲಿ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷ ಜಾರಿ ನಿರ್ದೇಶನಾಲಯ ಮತ್ತು ಇನ್ನಿತರೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದ ಅವರು ಉಗ್ರಗಾಮಿಗಳನ್ನು ಸೃಷ್ಟಿಸಲು ಮತ್ತು ಹಿಂಸಾಚಾರವನ್ನು ಉಂಟುಮಾಡಲು ಬಯಸುತ್ತಾರೆ ಎಂದಿದ್ದಾರೆ.
ಬಿಜಪಿ ನಾಯಕರಿಗೆ ಧಾರ್ಮಿಕ ಮತಾಂತರ ಮತ್ತು ಕೋಮುವಾದ ಹೊರತುಪಡಿಸಿ ಅವರಿಗೆ ಏನೂ ತಿಳಿದಿಲ್ಲ ಎಂದ ಅವರು
ರಾಜ್ಯದಲ್ಲಿ ನಡೆದ ಎರಡು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ ಕ್ರಮ ಕೈಗೊಂಡಿರುವ ಬಗ್ಗೆಯೂ ಅವರು ವಾಗ್ದಾಳಿ ನಡೆಸಿದ್ದಾರೆ.
“ಭಯದ ವಾತಾವರಣ” ಸೃಷ್ಟಿಸಬೇಡಿ ಎಂದು ಒಂದು ದಿನದ ಹಿಂದೆ ಸುಪ್ರೀಂ ಕೋರ್ಟ್ ಇಡಿಗೆ ಹೇಳಿದೆ. ರಾಜ್ಯದಲ್ಲಿ ೨,೦೦೦ ಕೋಟಿ ಮದ್ಯ ಹಗರಣ ನಡೆದಿದೆ. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಇಡಿ ಈ ಕೆಲಸಗಳನ್ನು ಮಾಡುತ್ತಿದೆ ಎಂದು ವಕೀಲ ಕಪಿಲ್ ಸಿಬಲ್ ನ್ಯಾಯಾಲಯದಲ್ಲಿ ಹೇಳಿದ್ದಾರೆ,” ಎಂದು ಬಘೇಲ್ ಹೇಳಿದ್ದಾರೆ.
ಸಮಾಜದ ಪ್ರತಿಯೊಂದು ವರ್ಗವೂ ಕಾಂಗ್ರೆಸ್ ಸರ್ಕಾರದೊಂದಿಗೆ ಸಂಪರ್ಕ ಹೊಂದಿದೆ “ನಾವು ಅವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ಅವರಿಗೆ ತಿಳಿದಿದೆ. ಈ ಕಾರಣಕ್ಕಾಗಿ ಬಿಜೆಪಿ ಕಿರಿ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.