ಹಿಂದೆ ಮುಗಿಬಿದ್ದು ಕಾವ್ಯ ಆಲಿಸುತ್ತಿದ್ದರು: ಮಸಬಿನಾಳ ಶ್ರೀ

ವಿಜಯಪುರ :ಮೇ.30: ಹಿಂದೆ ಕಾವ್ಯ ರಸಿಕರು ಮುಗಿಬಿದ್ದು ಕಾವ್ಯಗಳನ್ನು ಆಲಿಸುತ್ತಿದ್ದರು. ಕವಿಗೋಷ್ಠಿ ಯಶಸ್ವಿಯಾಗಲು ಉತ್ತಮ ಕವಿಗಳ ಅತ್ಯವಶ್ಯಕ ಎಂದು ಮಸಬಿನಾಳದ ದಾಸೋಹ ವಿರಕ್ತಮಠದ ಸಿದ್ದರಾಮ ಸ್ವಾಮಿಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಲಿಂ; ಸಿದ್ದಲಿಂಗ ಶಿವಯೋಗಿಗಳ 89 ನೇ ಜಾತ್ರಾ ಮಹೋತ್ಸವದ ಇಂಗಳೇಶ್ವರ ಉತ್ಸವ ಸಮಿತಿ ಹಾಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಮೂರನೆಯ ಗೋಷ್ಠಿ ಕವನ ವಾಚನ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತಾ ಕವನ ರಚನೆಯ ಕಾರ್ಯ ತುಂಬ ಕ್ಲಿಷ್ಟಕರವಾಗಿದೆ. ಸಾಮಾನ್ಯ ಜನರ ಜೀವನದ ಕುರಿತು ಮೌಲ್ಯ ಕಾಪಾಡುವ ಕಾವ್ಯ ವಾಚನ ಇಂದು ಅವಶ್ಯವಿದೆ. ಮಹಾಪುರುಷ ಜೀವನ ಚರಿತ್ರೆಯು ಕವನಗಳ ಮೂಲಕ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಬೇಕು ಎಂದರು.

ಇಂಗಳೇಶ್ವರ ವಿರಕ್ತಮಠದ ಜಗದ್ಗುರು ಡಾ, ಸಿದ್ದಲಿಂಗ ಸ್ವಾಮೀಜಿಯರು ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಕವಿಗೋಷ್ಠ ತುಂಬ ಅಥ9ಪೂಣ9ವಾಗಿ ಸಾಗಿತು. ಇಂತಹ ಗುಣಮಟ್ಟದ ಕವಿತೆಗಳನ್ನು ರಚಿಸಿ ವಾಚನ ಮಾಡಿದ್ದು ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರಿಸಮನಾದ ಗೋಷ್ಠಿ ಇದಾಗಿದೆ .ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆಗಳನ್ನು ಕಲ್ಪಿಸುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಬೆಳೆಸುವ ಕಾರ್ಯ ತುಂಬ ಶ್ಲಾಘನೀಯ ಇಂದು ಭಾಗವಹಿಸಿದ ಎಲ್ಲ ಕವಿಗಳು ತುಂಬ ಉಪಯುಕ್ತ ಕವನಗಳನ್ನು ರಚಿಸಿದ್ದಾರೆ ಎಂದರು.

ಬಸವನ ಬಾಗೆವಾಡಿ ಸಿದ್ದಲಿಂಗ ಸ್ವಾಮೀಜಿ ಶಿವಪ್ರಕಾಶ ಶಿವಪ್ರಕಾಶ ಶಿವಾಚಾರ್ಯ ಇಟಗಿಯ ಮಲ್ಲಿಕಾರ್ಜುನ ಸ್ವಾಮೀಜಿ ಚಡಚಣ ಷಡಕ್ಷರಿ ಸ್ವಾಮೀಜಿ ಹಾಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿದರು.

ರುಕ್ಮಿಣಿ ಅಗಸರ ಮಡಿವಾಳಮ್ಮ ನಾಡಗೌಡ ಶಿವಾಜಿ ಮೋರೆ ಸಿದ್ರಾಮಯ್ಯ ಹಿರೇಮಠ ಸಂಗಮೇಶ ಕೆರೆಪ್ಪಗೋಳ ಕೆ ಎಸ್ ಬಾಗೇವಾಡಿ ಲಕ್ಷ್ಮಿ ಕುಲಗುಡ್ಡ ಎಸ್ ಎಮ್ ಕಾಶಿನಕುಂಟೆ ಅಂಬಿಕಾ ಕನಕಪ್ಪಗೋಳ ಸಂಗನಗೌಡ ಹಚಡದ ಕವನ ವಾಚನ ಮಾಡಿದರು. ಈರಣ್ಣ ಬೆಕಿನಾಳ ನಿಂಗಪ್ಪ ಬೊಮ್ಮನಹಳ್ಳಿ ಮಡಿವಾಳಮ್ಮ ನಾಡಗೌಡ ಕವನ ವಚನ ಮಾಡಿದರು.

ಶ್ರೀಶೈಲ ಹಾದಿಮನಿ ಬಸವರಾಜ ಮೇಟಿ ಶಿವು ಮಡಕೇಶ್ವರ ಕೋಟ್ರೇಶ ಹೆಗಡಿಹಾಳ ವಿಜಯಲಕ್ಷ್ಮೀ ಕೌಲಗಿ, ಶಂಕರ ಬೈಚಬಾಳ

ಮುತಾದವರು ಉಪಸ್ಥಿತರಿದ್ದರು.