ಹಿಂದೂ ವಿರೋಧಿ ಹೇಳಿಕೆ ಖಂಡಿಸಿ ಸತೀಶ ಜಾರಕಿಹೊಳಿ ಭಾವಚಿತ್ರ ಸುಟ್ಟು ಪ್ರತಿಭಟನೆ

ರಾಯಚೂರು, ನ.೯- ಹಿಂದೂ ವಿರೋಧಿ ಹೇಳಿಕೆ ಖಂಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಭಾವಚಿತ್ರವನ್ನು ಸುಟ್ಟು ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಮುಖಂಡರು ಸತೀಶ ಜಾರಕಿಹೊಳಿ ವಿರುದ್ಧ ಧಿಕ್ಕಾರ ಕೂಗಿ ಕೂಡಲೇ ಕ್ಷಮೆ ಕೋರುವಂತೆ ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಮಾತನಾಡಿ,ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹಿಂದೂ ವಿರೋಧಿ ಹೇಳಿಕೆ ಖಂಡಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.ಕೂಡಲೇ ಅವರ ಹೇಳಿಕೆಯನ್ನು ಹಿಂಪಡೆಯಬೇಕು.ಅವರ ಹೇಳಿಕೆಯಿಂದ ೮೦ಕೋಟಿ ಹಿಂದೂಗಳಿಗೆ ಅವಮಾನವಾಗಿದೆ.ಕಾಂಗ್ರೆಸ್ ನಾಯಕರು ಹಿಂದೂ ಧರ್ಮದ ಬಗ್ಗೆ ಅಲ್ಪ ಸೋಲ್ಪ ತಿಳಿದುಕೊಂಡಿದ್ದಾರೆ. ಇನ್ನು ಮುಂದೆ ಇದೇ ರೀತಿ ಹೇಳಿಕೆ ನೀಡಿದರೆ ಪಕ್ಷದ ಕಾರ್ಯಕರ್ತರು ಉಗ್ರ ಸ್ವರೂಪದ ಹೋರಾಟವನ್ನು ಮಾಡುತ್ತೇವೆ.ಸಭೆ ಹಾಗೂ ಬಂದು ಹೋಗುವಂಥ ರಸ್ತೆಗಳಲ್ಲಿ ರಸ್ತೆ ತಡೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶಿವಬಸಪ್ಪ ಮಾಲಿಪಾಟೀಲ್, ಬಿ.ಗೋವಿಂದ,ರಾಜಕುಮಾರ,ಕೆ.ಎಂ.ಪಾಟೀಲ್, ಶೇಖರರೆಡ್ಡಿ,ಕಡಗೊಳ ಅಂಜಿನೆಯ್ಯ,
ಎ.ಚಂದ್ರಶೇಖರ್, ಬಂಡೆಶ್ ,ಗುಡಿಸಿ ನರಸರೆಡ್ಡಿ,ಸಂಜೀವರೆಡ್ಡಿ, ಉಟ್ಕೂರು ರಾಘವೇಂದ್ರ, ಮಹೇಂದ್ರರೆಡ್ಡಿ,ಎಂ.ಕೆ.ನಾಗರಾಜ,ವಿ.ನರಸಿಂಹಲು,ವಿಷ್ಣುವರ್ಧನ್ ರೆಡ್ಡಿ,ಸಂಜುರೆಡ್ಡಿ, ಡಾ.ನಾಗರಾಜ ಬಾಲ್ಕಿ ,ಶಶಿರಾಜ್ ಮಸ್ಕಿ,ಶಶಿರಾಜ್,ಸುಲೋಚನಾ,ವಾಣಿ,ಗಂಗೂಬಾಯಿ,ಸುಷ್ಮಾ,ನಾಗವೇಣಿ,ಸಂಗೀತ, ಗಜ್ಜಿ ರಾಮಕೃಷ್ಣ, ನವೀನರೆಡ್ಡಿ,ಯು.ಅಂಜಿನೆಯ್ಯ ,ವೀರೇಶ್ ತಳವಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.