ಹಿಂದೂ ಯುವ ಶಕ್ತಿಯಿಂದ ಒಣಕೊಬ್ಬರಿ ಗಣಪ ಪ್ರತಿಷ್ಠಾಪನೆ

ದಾವಣಗೆರೆ.ಸೆ.4: ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಹಿಂದೂ ಯುವ ಶಕ್ತಿ ಸಂಘದಿಂದ ಕಳೆದ 30 ವರ್ಷದಿಂದ ಗಣೇಶ ಪ್ರತಿಷ್ಠಾಪನೆ, ಪ್ರತಿವರ್ಷವೂ ವಿಶಿಷ್ಠ, ವಿಶೇವಾಗಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಗಣೇಶನ ಪೂಜೆಗೆ ಪ್ರಿಯವಾದ ವಸ್ತುಗಳನ್ನೇ ಬಳಸಿ ಗಣೇಶ ಮೂರ್ತಿ ತಯಾರಿಸಲಾಗಿದೆ.ಸಂಘಟನೆಯ ಸಂಚಾಲಕ ಶ್ರೀನಿವಾಸ್ ಮಾತನಾಡಿ, ತೆಂಗಿನಕಾಯಿ, ಹಸಿ ಅಡಿಕೆ, ಉತ್ತುತ್ತಿ, ಏಲಕ್ಕಿ, ರುದ್ರಾಕ್ಷಿ, ಮುತ್ತಿನ ಮಣಿಗಳು, ಒಂದು ರೂಪಾಯಿ ನಾಣ್ಯ, ಕವಡೆ, ರೇಷ್ಮೇ ಗೂಡು, ಮೋದಕ, ಅರಿಷಿನ ಕೊಂಬು, ಸಣ್ಣಸಣ್ಣ ಗಣಪತಿಯಿಂದ ಗಣೇಶ್, ನವದಾನ್ಯಗಳಿಂದ ಗಣಪ, ಹೀಗೆ ಹಲವಾರು ರೀತಿಯ ಪೂಜೆಗೆ ಬಳಸುವ ವಸ್ತುಗಳಿಂದ ಗಣೇಶ ತಯಾರಿಸಿ ಹಬ್ಬ ಆಚರಿಸುತ್ತಾ ಬಂದಿದ್ದೇವೆ ಎಂದು ಹೇಳಿದರು.ಕಳೆದ 2ವರ್ಷ ಕೊರೋನಾದಿಂದಾಗಿ ಸರಳವಾಗಿ ಆಚರಣೆ, ಈ ವರ್ಷ ವಿಜೃಂಭಣೆಯಿಂದ ಗಣಪತಿ ಉತ್ಸವ ಆಚರಿಸಲಾಗುತ್ತಿದ್ದು, ಸುಮಾರು 13 ಅಡಿ ಎತ್ತರದ 201 ಕೆಜಿ ಒಣಕೊಬ್ಬರಿಗಳಿಂದ ವಿಘ್ನೇಶ್ವರ ಪ್ರತಿಷ್ಠಾಪನೆ, ದರ್ಶನ ಪಡೆಯಲು 10ನೇ ತಾರಿಖಿನವರೆಗೆ ಅವಕಾಶ ಇದೆ. 9ರಂದು ಗಣಹೋಮ, ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಸಾರ್ವಜನಿಕರಿಗೆ ಅದರಲ್ಲೂ ವಿಕಲಚೇತನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಲೋಕಕಲ್ಯಾಣರ್ಥಕ್ಕಾಗಿ ಗಣಹೋಮ ಪೂಜೆ ಮಾಡಲಾಗುವುದು. ನಂತರ 10ರಂದು ನಗರದ ರಾಜಬೀದಿಗಳಲ್ಲಿ ಜನಪದ ಕಲಾತಂಡಗಳೊಂದಿಗೆ ಗಣಪತಿ ಮೂರ್ತಿಯನ್ನು ಕೊಂಡೊಯ್ದು ವಿಸರ್ಜನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಈ ವೇಳೆ ಹಿಂದೂ ಯುವ ಶಕ್ತಿಯ ಪದಾಧಿಕಾರಿಗಳು ಇದ್ದರು.

Attachments area