ಹಿಂದೂ, ಮುಸ್ಲಿಂ ಭಾವೈಕ್ಯತೆ ಹಬ್ಬ ಈದ್-ಮಿಲಾದ್

ಆಳಂದ:ಅ.29:ಪ್ರಸಕ್ತ ವರ್ಷದಲ್ಲಿ ಕೋವಿಡ್ -19 ಕೊರೋನಾ ವೈರಸ್ ಹರಡುವಿಕೆಯ ತಡೆಗಟ್ಟಲು ಸರಕಾರ ಈದ್-ಮಿಲಾದ್ ಹಬ್ಬವನ್ನು ಸಾಮೂಹಿಕವಾಗಿ ಆಚರಣೆಗೆ ನಿಷೇಧಿಸಿದೆ ಆದಷ್ಟು ಮಟ್ಟಿಗೆ ಸಮಾಜದ ಭಾಂಧವ್ಯರು ತಮ್ಮ ತಮ್ಮ ಮನೆಗಳಲ್ಲಿ ಸರಳವಾಗಿ ಆಚರಿಸಬೇಕೆಂದು ಡಿವೈಎಸ್‍ಪಿ ಮಲ್ಲಿಕಾರ್ಜು ಸಾಲಿ ಅವರು ತಿಳಿಸಿದ್ದಾರೆ.
ಪಟ್ಟಣದ ಡಿವೈಎಸಪಿ ಕಾರ್ಯಾಲಯದಲ್ಲಿ ಆಯೋಜಿಸಿದ ಶಾಂತಿಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಕೋವಿಡ-19 ರ ಈಗಿನ ಪರಿಸ್ಥಿತಿಯ ಅರಿತುಕೊಂಡು ಸರಕಾರದ ಮಾರ್ಗಸೂಚಿಯಂತೆ ಈದ್ -ಮಿಲಾದ್ ಮೇರವಣಿಗೆ ಇಲ್ಲ, ಸಾಮೂಹಿಕವಾಗಿ ಎಲ್ಲ ಸೇರುವಂತೆ ಇಲ್ಲ, ಸರಕಾರದ ಕಡ್ಡಾಯವಾದ ನಿಯಮ ವಿದ್ದು. ಎಲ್ಲರೂ ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಅವಶ್ಯಕತೆ ಇದೆ ಎಂದು ಹೇಳಿದರು.
ಸಮಾಜದ ಮುಖಂಡ ಅಬ್ದುಲ ಸಲಾಂ ಸಗರಿ, ಮಾತನಾಡಿದರು. ಈದ್-ಮಿಲಾದ ಹಬ್ಬ ನಮ್ಮ ಸಮಾಜಕ್ಕೆ ಅಷ್ಟೇ ಮೀಸಲು ಇಲ್ಲ ಈ ಹಬ್ಬವು ಹಿಂದೂ ಮುಸ್ಲಿಂರ ಭಾವೈಕ್ಯತೆಯ ಹಬ್ಬವಾಗಿರುವುದರಿಂದ ಎಲ್ಲರೂ ಸಹೋದರತೆಯಿಂದ ಆಚರಣೆ ಮಾಡುತ್ತಿದ್ದು. ಇದರಲ್ಲಿ ಸರಕಾರದ ನಿಯಮಗಳು ಅನುಸರಿಸಿಕೊಂಡು ಹಬ್ಬವನ್ನು ಸರಳವಾಗಿ ಆಚರಣೆ ಮಾಡುವುದಾಗಿ ಸಭೆಯಲ್ಲಿ ಹೇಳಿದರು.
ತಹಶೀಲ್ದಾರ ಯಲ್ಲಪ್ಪ ಸುಬೇದಾರ ಮಾತನಾಡಿ ಹಬ್ಬಗಳಲ್ಲಿ ಸರಕಾರದ ನಿಯಮಗಳನ್ನು ಪಾಲಿಸಿ ಸರಳವಾಗಿ ಆಚರಿಸಿ ಎಂದು ಸಲಹೆ ನೀಡಿದರು.
ಪಿಎಸ್‍ಐ ಮಹಾತೇಂಶ ಪಾಟೀಲ್, ಪುರಸಭೆ ಸದಸ್ಯ ಅಬ್ದುಲ ವಾಹೀದ ಜರದೀ, ಪೀರದೋಸ್ ಅನ್ಸಾರಿ, ಮುಖಂಡರಾದ ಆಸೀಪ್ ಅನ್ಸಾಗಿ, ಯೂಸಪ್ ಅನ್ಸಾರಿ, ಅಮಜದಲಿ ಕರಜಗಿ, ಹಮ್ಮಿದ ಅನ್ಸಾರಿ, ಗುಲಾಬ ಟಪ್ಪೇವಾಲೆ, ಸಮಾಜದ ಇನ್ನಿತರ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದರು. ಪೊಲೀಸ ಸಿಬ್ಬಂದಿಗಳಾದ ಸಿದ್ಧರಾಮ ಬಿರಾದಾರ, ಶೇಖರ ಸೇರಿದಂತೆ ಇತರರು ಇದ್ದರು.