ಹಿಂದೂ ಮುಸ್ಲಿಂ ಪ್ರೇಮಕಥೆಯ `ಲವ್ ‘

ಹಿಂದೂ ಹುಡುಗ ಹಾಗೂ ಮುಸ್ಲಿಂ ಹುಡುಗಿಯ ನಡುವಿನ‌ ಪ್ರೇಮಕಥೆಯನ್ನು ನಿರ್ದೇಶಕ ಮಹೇಶ್ ಸಿ‌. ಅಮ್ಮಳ್ಳಿದೊಡ್ಡಿ ಚಿತ್ರದ ಮೂಲಕ ತೆರೆಗೆ ತರಲು ಮುಂದಾಗಿದ್ದಾರೆ. “ಓ” ಎಂಬ ಹಾರರ್ ಚಿತ್ರ‌ನಿರ್ದೇಶಿಸಿದ್ದ ಮಹೇಶ್ ಈಗ ಪ್ರೀತಿಯ ಹಿಂದೆ ಬಿದ್ದಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳ ಮೊದಲ ವಾರ ಚಿತ್ರವನ್ನು ತೆರೆಗೆ ಬರಲಿದೆ.

ನಿರ್ದೇಶಕ ಸಂಘದ ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ನಾಗೇಂದ್ರ ಅರಸ್, ಖಜಾಂಚಿ ಮಂಜು, ನಟ ಅಮಿತ್, ನಿರ್ದೇಶಕ ಮಹೇಶ್ ಕುಮಾರ್  ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಚಿತ್ರವನ್ನು ನೈಜ ಘಟನೆಯ ಪ್ರೇರಿತವಾದ ಕಥೆಯಾಗಿರುವ ಲವ್ ಚಿತ್ರವನ್ನು ಉಡುಪಿ, ಕೋಟ, ಕುಂದಾಪುರ, ಬೈಂದೂರ್, ಬಾಗಲಕೋಟೆ ಮತ್ತು ಬೆಂಗಳಳೂರಿನಲ್ಲಿ ಚಿತ್ರೀಕರಿಸಲಾಗಿದೆ

ಮಹೇಶ ಸಿ ಅಮ್ಮಳ್ಳಿದೊಡ್ಡಿ ಮಾತನಾಡಿ, ಹೊಸಬರಿಗೆ ಮಾಸ್  ಸಿನಿಮಾ ಆಗಿ ಬರುವುದಿಲ್ಲ ಎನ್ನುವ ಕಾರಣಕ್ಕೆ  ಲವ್ ಜಾನರ್ ಮಾಡಿದ್ದೇನೆ. ಈಗಾಗಲೇ ಸೆನ್ಸಾರ್ ಕೂಡ ಆಗಿದೆ. ಸದ್ಯದಲ್ಲಿಯೇ ಜನರ ಮುಧೆ ತರಲಾಗುವುದು ಎಂದರು.

ನಟ ಪ್ರಜಯ್ ಜಯರಾಮ್ ಮಾತನಾಡಿ  ಸಹಾಯಕ ನಿರ್ದೇಶಕನಾಗಲು ಬಂದು ನಾಯಕನಾಗಿದ್ದೇನೆ ಖುಷಿಯಾಗಿದೆ ಎಂದರೆ ನಟಿ ವೃಷ ಪಾಟೀಲ್, ಒಂದಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದೇನೆ. ಕಥೆ ಕೇಳಿದೆ ಇಷ್ಟವಾಯಿತು ಎಂದರು.

ಚಿತ್ರದಲ್ಲಿ  ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ ಸೇರಿದಂತೆ ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರೀ, ರಜತ್ ಶೆಟ್ಟಿ ಹಲವರು ಚಿತ್ರದ ಭಾಗವಾಗಿದ್ದಾರೆ. ದಿವಾಕರ್ ಲವ್ ಚಿತ್ರ ನಿರ್ಮಿಸುತ್ತಿದ್ದು, ಸಿದ್ದಾರ್ಥ್ ಹೆಚ್ ಆರ್ ಛಾಯಾಗ್ರಹಣ, ರೋಸಿತ್ ವಿಜಯನ್, ಶ್ರೀ ಸಾಯಿ ಕಿರಣ್ ಸಂಗೀತ, ಶಿವಪ್ರಸಾದ್ ಹಿನ್ನೆಲೆ ಸಂಗೀತವಿದೆ.