ಹಿಂದೂ ಮುಸ್ಲಿಂ ಒಂದೇ ನಾಣ್ಯದ ಎರಡು ಮುಖಗಳು: ಬಾಷುಮಿಯ್ಯ ಕೊಂಚುರು

ವಡಗೇರಾ:ಜೂ.30: ನಾವೆಲ್ಲರೂ ಸೋದರತ್ವದಿಂದ ಜೀವನ ಸಾಗಿಸುತ್ತಿದ್ದು ಪ್ರತಿಯೊಂದು ಧರ್ಮದವರು ಪರಸ್ಪರ ಸಹಕಾರದಿಂದ ಜಿವನ ನಡೆಸಿದಾಗ ಮಾತ್ರ ಶಾಂತಿ ನೆಮ್ಮದಿ ಸಿಗುತ್ತೆ ಎಂದೂ ಬಕ್ರೀದ್ ಹಬ್ಬದ ಶಾಂತಿ ಸಭೆಯಲ್ಲಿ ವಡಗೇರಾ ಪೆÇಲೀಸ್ ಠಾಣೆಯ ಆರಕ್ಷಕ ನಿರೀಕ್ಷರಾದ ಬಾಷುಮಿಯ್ಯ ಕೊಂಚುರವರು ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದ ಅವರು ಹಿಂದೂ ಮುಸ್ಲಿಂ ಒಂದೇ ಎಂಬ ಭಾವೈಕ್ಯತೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ. ಠಾಣೆಯ ಸಿಬ್ಬಂದಿಗಳಾದ. ಶಿವಶಂಕರ. ಮಲ್ಲಪ್ಪ. ಸಿದ್ದ ವೀರಪ್ಪ. ಮಹೇಂದ್ರ ಕಿಲನಕೇರಾ. ಸಾಹೇಬ ರೆಡ್ಡಿ. ಸಿದ್ದರಾಮ. ಊರಿನ ಮುಖಂಡರುಗಳಾದ. ಮಹಮ್ಮದ್ ಖುರೇಶಿ. ಚನ್ನಪ್ಪ ಸಾಹುಕಾರ ಗೋನಾಲ. ಅಬ್ದುಲ್ ಕತಾಲಿ. ಗುರು ನಾಟೆಕಾರ. ಮೈಬುಬ ಖುರೆಶಿ. ಭೀಮಣ್ಣ ಬುದಿನಾಳ. ಹುಸೇನ್ ಸಾಬ.ಖುರೇಶಿ. ಭಾಷುಮಿಯಾ ಬೇಕರಿ. ಶರಣಪ್ಪ. ಸೈಯದ್ ಖುರೇಶಿ ಹಾಗೂ ಇನ್ನಿತರ ಉಪಸ್ಥಿತರಿದ್ದರು.