ತಾಳಿಕೋಟೆ:ಸೆ.23: ಗಣಪತಿ ಅಂದರೆ ಮಾತೃಭಕ್ತಿ ಬುದ್ದಿ ಶಕ್ತಿ ಮತ್ತು ವಿಗ್ನ ವಿನಾಶಕ್ಕೆ ಪ್ರತಿರೂಪವಾಗಿರುವಂತಹ ಸಂಖ್ಯೇತವಾಗಿರುವಂತಹ ಒಂದು ಶಕ್ತಿಯಾಗಿದೆ ನಾವು ಯಾವದೇವರನ್ನು ಪೂಜೆ ಮಾಡುತ್ತಿವಲ್ಲಾ ಆ ದೇವರಂತೆ ಆಗಬೇಕು ಹಾಗೆಂದರೆ ಗಣಪತಿಯ ಹಾಗೆ ಆಕಾರ ತಾಳುವದಲ್ಲಾ ಅವನಲ್ಲಿರುವ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕೆಂದು ಶ್ರೀಶೈಲದ ಶ್ರೀ ಮದ್ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಶ್ರೀಶೈಲ ಜಗದ್ಗುರುಗಳಾದ ಡಾ.ಚನ್ನಸಿದ್ದರಾಮ ಪಂಡಿರಾಧ್ಯ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ನುಡಿದರು.
ಶುಕ್ರವಾರರಂದು ತಾಳಿಕೋಟೆ ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದೂ ಮಹಾ ಗಣಪತಿ ಮಂಡಳಿಯ ವತಿಯಿಂದ ಪ್ರತಿಷ್ಠಾಪಿಸಲಾದ ಬೃಹತ್ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಆಶಿರ್ವಚನ ನೀಡಿದ ಜಗದ್ಗುರುಗಳು ಗಣಪತಿ ಹೇಗೆ ಮಾತೃಭಕ್ತಿ ಸಂಪನ್ನನಾಗಿದ್ದಾ ಹಾಗೆ ನಮಗೆ ಜನ್ಮಕೊಟ್ಟಿರುವಂತಹ ತಾಯಿಯನ್ನ ಮತ್ತು ನಮಗೆ ಜೀವನ ಕೊಟ್ಟು ಪೊಷಿಸುವಂತಹ ನಮ್ಮ ಭಾರತ ಮಾತೆಯನ್ನು ಪೂಜೆ ಭಾವನೆಯಿಂದ ಗೌರವ ಭಾವನೆಯಿಂದ ಪ್ರಸಂಗ ಬಂದರೆ ಏನೆಲ್ಲಾ ತ್ಯಾಗ ಮಾಡಲಿಕ್ಕೆ ಮತ್ತು ಅರ್ಪಣೆ ಮಾಡಲಿಕ್ಕೆ ತಯಾರು ಇರುವಂತೆ ಭಾವನೆಯಿಂದ ನಾವು ಜೀವನ ಸಾಗಿಸಬೇಕು ಬುದ್ದಿವಂತರಾಗಿ ನಾವು ಜೀವನ ಸಾಗಿಸಬೇಕು ಜೊತೆಗೆ ನಮಗಾಗಿರಬಹುದು ನಮನ್ನು ನೆಚ್ಚಿಕೊಂಡವರಾಗಿರಬಹುದು ಅವರಿಗೆ ತೊಂದರೆ ಬಂದರೆ ಅವರ ಕಷ್ಟವನ್ನು ನಿವಾರಣೆ ಮಾಡಲಿಕ್ಕೆ ನಾವು ಪ್ರಯತ್ನ ಮಾಡಬೇಕು ನಮ್ಮ ಕಷ್ಟಗಳು ಯಾವಾಗ ದೂರವಾಗುತ್ತವೆ ಅಂದರೆ ಮೊತ್ತಬ್ಬರ ಕಷ್ಟಗಳನ್ನು ದೂರ ಮಾಡಲಿಕ್ಕೆ ಯಾವಾಗ ಕೈ ಜೋಡಿಸುತ್ತೇವಲ್ಲಾ ಅವಾಗ ನಮ್ಮ ಕಷ್ಟಗಳು ತಾವಾಗಿಯೇ ದೂರವಾಗುತ್ತವೆ ಇಂತಹ ಮೌಲ್ಯಗಳನ್ನು ಅಳವಡಿಸಿಕೊಂಡು ಗಣಪತಿಯನ್ನು ನಾವು ಆರಾಧನೆ ಮಾಡಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ 10 ವರ್ಷಗಳಿಂದ ಗಣಪತಿ ಪೂಜೆಯನ್ನು ಮಾಡುತ್ತಾ ಬಂದಿರುವ ದಶಮಾನೋತ್ಸವದ ಸಂಭ್ರಮದಲ್ಲಿರುವ ತಾಳಿಕೋಟೆಯ ಹಿಂದೂ ಮಹಾ ಗಣಪತಿ ಮಂಡಳಿಯವರು ಹಿಂದೂತ್ವದ ಸಮ್ಮೇಳನವನ್ನು ಹಿಂದೂತ್ವದ ಸಂಘಟನೆಯನ್ನು ಮಾಡುವ ನಿಟ್ಟಿನಲ್ಲಿ ಮುಂದಾಗಿರುವದು ನಿಜಕ್ಕೂ ಸ್ವಾಗತಾರ್ಹವಾದ ಬೆಳವಣಿಗೆಯಾಗಿದೆ ಮುಂದಿನ ದಿನಮಾನಗಳಲ್ಲಿ ಈ ಹಿಂದೂ ಮಹಾ ಗಣಪತಿ ಮಂಡಳಿ ಇನ್ನೂ ಉಜ್ವಲವಾಗಿ ಬೆಳೆಯಲಿ ತನ್ಮೂಲಕ ದೇಶ ಮತ್ತು ಹಿಂದೂ ಧರ್ಮ ಈ ಎಲ್ಲವೂ ಬೆಳೆಯುವಂತಾಗಲಿ ಎಂದು ಹಾರೈಸಿದ ಜಗದ್ಗುರುಗಳು ಬರುವ ದಿನಮಾನಗಳಲ್ಲಿ ಸಂಪೂರ್ಣ ದಿನವನ್ನು ತಾಳಿಕೋಟೆ ಹಿಂದೂ ಮಹಾಗಣಪತಿ ಮಂಡಳಿಯ ಪೂಜಾ ಕಾರ್ಯಕ್ರಮದಲ್ಲಿ ಮಿಸಲಿಡುವದಾಗಿ ತಿಳಿಸಿದ ಅವರು ಇವತ್ತು ವಿಶೇಷವಾಗಿ ಬೆಳಗಾವಿಯಲ್ಲಿ ಮೋಡಗಳೇ ಗಣಪತಿಯ ರೂಪವನ್ನು ಧಾರಣ ಮಾಡಿಕೊಂಡು ಇಡೀ ಭಾರತೀಯರಿಗೆಲ್ಲಾ ಆಶಿರ್ವಾದ ಮಾಡಿರುದನ್ನು ತಮ್ಮ ಮೋಬೈಲ್‍ನಲ್ಲಿ ಸೇರೆ ಹಿಡಿದಿರುವದನ್ನು ಭಕ್ತಾಧಿಗಳಿಗೆ ಪ್ರದರ್ಶಿಸಿದ ಜಗದ್ಗುರುಗಳು ಆಕಾಶದಲ್ಲಿರುವ ಮೋಡಗಳು ಗಣಪತಿಯ ರೂಪದಲ್ಲಿ ಆಶಿರ್ವದಿಸಿರುವದು ಗಣಪತಿಯೇ ಪ್ರತ್ಯಕ್ಷನಾಗಿ ಇಡೀ ಭಾರತೀಯರೆಲ್ಲರಿಗೂ ಆಶಿರ್ವದಿಸಿರುವದು ಇದಕ್ಕಿಂದ ಉದಾರಣೆ ಮತ್ತೊಂದು ಬೇಕಿಲ್ಲಾ ಗಣಪತಿಯ ಕೃಪೆ ಎಲ್ಲರಿಗೂ ಆಗಿದೆ ಎಂದು ಜಗದ್ಗುರುಗಳು ನುಡಿದರು.
ಇನ್ನೋರ್ವ ಗುಂಡಕನಾಳ ಬೃಹನ್ ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಮೊದಲೇ ನಿಗಧಿ ಪಡಿಸಿದಂತ ಗಣಪತಿಗೆ ದೈನಂದಿನ ಪೂಜೆಯ ಜೊತೆಗೆ ಇಂದು ವಿಶೇಷವಾದ ವೇ.ಸಂತೋಷಬಟ್ ಜೋಶಿ ಅವರ ನೇತೃತ್ವದಲ್ಲಿ ಗಣ ಹೋಮ ಕಾರ್ಯಕ್ರಮವನ್ನು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆಸಲಾಯಿತು ಹೋಮ ಕಾರ್ಯಕ್ರಮವು ಮುಕ್ತಾಯಗೊಳ್ಳುತ್ತಿದ್ದಂತೆ ಸುಮಾರು 1 ಗಂಟೆಕಾಲ ವರುಣದೇವನ ಕೃಪಾಶಿರ್ವಾದದಿಂದ ಉತ್ತಮ ಮಳೆಯಾಯಿತು ಆದರೆ ಶ್ರೀಶೈಲ ಜಗದ್ಗುರುಗಳನ್ನು ಗಣಪತಿಯ ಮಹಾಪೂಜಾ ಕಾರ್ಯಕ್ರಮಕ್ಕೆ ಕರಿಸಬೇಕೆಂದು ಆಶಾಭಾವನೆಯಂತೆ ಮತ್ತು ಇಲ್ಲಿಯ ಹಿಂದೂ ಮಹಾಗಣಪತಿ ಮಂಡಳಿಯ ಭಕ್ತರ ಮನಸ್ಸಿನ ಅರಿಕೆಯನ್ನು ಅರಿತು ಶ್ರೀಶೈಲ ಜಗದ್ಗುರುಗಳು ಗಣಪತಿಯ ಸ್ಥಳಕ್ಕೆ ಆಗಮಿಸಿ ಧರ್ಮ ಕಾರ್ಯದಲ್ಲಿ ನಡೆಯುತ್ತಿರುವ ಹಿಂದೂ ಮಹಾ ಗಣಪತಿ ಮಂಡಳಿಗೆ ಆಶಿರ್ವದಿಸುವದರೊಂದಿಗೆ ತಮ್ಮ ಪಾದ ಸ್ಪರ್ಷಮಾಡಿರುವದು ಭಕ್ತರ ಭಕ್ತಿಗೆ ಇರುವ ದೊಡ್ಡ ಶಕ್ತಿ ಎಂದರೆ ತಪ್ಪಾಗಲಾರದು ಎಂದ ಶ್ರೀಗಳು ಜಗದ್ಗುರುಗಳ ಆಗಮನದಿಂದ ಮಂಡಳಿಗೆ ಇನ್ನಷ್ಟು ಧರ್ಮಕಾರ್ಯಕ್ಕೆ ಶಕ್ತಿ ನೀಡಿದಂತಾಗಿದೆ ಮುಂದಿನ ದಿನಗಳಲ್ಲಿ ಈ ಭಾಗದ ಭಕ್ತರ ಅಪೇಕ್ಷೆಯಂತೆ ಜಗದ್ಗುರುಗಳೇ ಒಂದು ದಿನ ಸಂಪೂರ್ಣ ಮಿಸಲಿಟ್ಟು ತಾಳಿಕೋಟೆಯ ಹಿಂದೂ ಮಹಾ ಗಣಪತಿ ಮಂಡಳಿಯ ಗಣಪತಿಯ ಪೂಜೆಯಲ್ಲಿ ಪಾಲ್ಗೊಳ್ಳುವದಾಗಿ ತಿಳಿಸಿರುವದು ಎಲ್ಲರಿಗೂ ಇನ್ನಷ್ಟು ಭಕ್ತಿ ಇಮ್ಮಡಿಗೊಳಿಸುವಂತೆ ಮಾಡಿದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀಶೈಲ ಜಗದ್ಗುರುಗಳನ್ನು ಮಹಿಳೆಯರು ಕುಂಭ ಕಳಸದೊಂದಿಗೆ ಅದ್ದೂರಿಯಾಗಿ ಸ್ವಾಗತಕೊರಿದರು. ಜಗದ್ಗುರುಗಳಿಗೆ ಮಹಾ ಗಣಪತಿಯ ಭಾವಚಿತ್ರ ನೀಡಿ ಮಂಡಳಿಯ ವತಿಯಿಂದ ಶ್ರೀಗಳು ಸನ್ಮಾನಿಸಿ ಗೌರವಿಸಿದರು.
ಕೆಸರಟ್ಟಿಯ ಶ್ರೀ ಶಂಕರಲಿಂಗ ಮಠದ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಹಾಗೂ ವೇ.ಸಂತೋಷಬಟ್ ಜೋಶಿ ಅವರು ಶ್ರೀಗಣೇಶನಿಗೆ ಪುಷ್ಪನಮನ ಸಲ್ಲಿಸಿದರು.
ಈ ಸಮಯದಲ್ಲಿ ಹಿಂದೂ ಮಹಾ ಗಣಪತಿ ಮಂಡಳಿಯ ಕಾರ್ಯಕರ್ತರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.