ಹಿಂದೂ ಮಹಾ ಗಣಪತಿಯ ಅದ್ದೂರಿ ಮೆರವಣಿಗೆ

ಹರಪನಹಳ್ಳಿ.ಸೆ.. ೧೧ : ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿಯನ್ನು ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.ಸುಮಾರು ಎಂಟು ಅಡಿ ಎತ್ತರದ ಹಿಂದೂ ಮಹಾ ಗಣಪತಿಯನ್ನು 11 ದಿನಗಳ ಬಳಿಕ ವಿಸರ್ಜನೆ ಮಾಡಲಾಯಿತು. ಗಣಪತಿಯನ್ನು ಟ್ಯಾಕ್ಟರ್‌ನಲ್ಲಿ ಸ್ಥಾಪಿಸಿ, ಸಾರ್ವ ಜನಿಕರ ಸಮ್ಮುಖದಲ್ಲಿ ವಿವಿಧ ವಸ್ತುಗಳನ್ನು ಹರಾಜು ಹಾಕಲಾಯಿತು. ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು.ಮೆರವಣಿಗೆ ಹಾದುಹೋಗುವ ಸ್ಥಳಗಳಲ್ಲಿ ಕೇಸರಿ ಬಂಟಿAಗ್ಸ್ಗಳಿAದ ಅಲಂಕರಿಸಲಾಗಿತ್ತು. ಕೇರಳದ ಚಂಡಿ ವಾದ್ಯಮೇಳ ಡ್ರಮ್ ಸೆಟ್, ಡಿಜೆ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು.ಕೋಟೆ ಆಂಜನೇಯ ದೇವಸ್ಥಾನದಿಂದ ಹೊರಟ ಮೆರವಣಿಗೆಯ ಟ್ರಾಕ್ಟರ್ ಚಾಲನೆ ಮೂಲಕ ಶಾಸಕರ ಪುತ್ರ ವಿಷ್ಣುವರ್ಧನ್ ರೆಡ್ಡಿ ಚಾಲನೆ ನೀಡಿದರು ನಂತರ ಹರಿಹರ-ಹೊಸಪೇಟೆ ರಸ್ತೆ ಮಾರ್ಗವಾಗಿ ಇಜಾರಿ ಶಿರಸಪ್ಪ ವೃತ್ತ, ಹಳೆ ಬಸ್ ನಿಲ್ದಾಣ ಹಾಗೂ ಐ.ಬಿ ವೃತ್ತದ ಮೂಲಕ ಕಾಯಕದಹಳ್ಳಿಯ ನಾಕಿನ ಕೆರೆಯವರೆಗೂ ತಲುಪಿ ವಿಶೇಷ ಪೂಜೆ ಸಲ್ಲಿಸಿ ವಿಸರ್ಜಿಸಲಾಯಿತು.ಮೆರವಣಿಗೆಯಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಅಂಬೇಡ್ಕರ್, ವಿ.ಡಿ. ಸಾರ್ವಕರ, ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ಬಸವಣ್ಣನವರ, ಭಜಿರಂಗಿ ಹನುಮಂತರವರುಗಳ ಭಾವಚಿತ್ರಗಳನ್ನು ಆಟೋಗಳ ಮೇಲೆ ಕಟ್ಟಿಕೊಂಡಿದ್ದುಗಮನ ಸೆಳೆದವು.ಸೂಕ್ತ ಬಂದೊಬಸ್ತ್ ನಿಡಿದ ಪೋಲಿಸರು ಪಟ್ಟಣದಾದ್ಯಂತ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ವಿಡಿಯೋ ಚಿತ್ರೀಕರಣ ಮಾಡಲಾಯಿತು. ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ್, ಡಿವೈಎಸ್ಪಿ ಬಿ.ಎಸ್.ಹಾಲಮೂರ್ತಿರಾವ್, ಹರಪನಹಳ್ಳಿ ಸಿಪಿಐ ಹಾಗೂ ಕೂಡ್ಲಿಗಿ ಸಿಪಿಐ ವಸಂತ್.ವಿ.ಅಸೋದೆ, ನಾಲ್ಕು ಪಿಎಸ್‌ಐ, ಎಎಸ್ಐ, ಸಿಆರ್ ಪಿ ತುಕಡಿ, ಹೋಂಗಾರ್ಡ್ಗಳು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಗೂ ಭಜರಂಗದಳದ ಕಾರ್ಯಕರ್ತರು ಇದ್ದರು

Attachments area