ಹಿಂದೂ ಪರಿಷತ್‍ಗೆ ನೇಮಕ

ಕಲಬುರಗಿ,ಡಿ.23- ಅಂತರ್‍ರಾಷ್ಟ್ರೀಯ ಹಿಂದೂ ಪರಿಷತ್ ಕಲಬುರಗಿ ಜಿಲ್ಲಾ ಅಧ್ಯಕ್ಷರನ್ನಾಗಿ ಭೀಮರಾಜ ರಾಠೋಡ ಮತ್ತು ಜಿಲ್ಲಾ ಕಾಯದರ್ಶಿಯನ್ನಾಗಿ ತಿರುಪತಿ ಲೋಖಂಡೆ ಅವರನ್ನು ನೇಮಕ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ ಇಚೇಗೆ ಜರುಗಿದ ಜರುಗಿದ ಸಭೆಯಲ್ಲಿ ಹಿಂದೂ ಸಂಘಟನಾ ಸಭೆಯಲ್ಲಿ ಪರಿಷತ್ ರಾಜ್ಯಾಧ್ಯಕ್ಷ ರಮೇಶ ಜಿ.ಕುಲಕರ್ಣಿ ಹುಬ್ಬಳ್ಳಿ ಹಾಗೂ ಉತ್ತರ ಪ್ರಾಂತ ಕಾರ್ಯದರ್ಶಿ ರಾಘವೇಂದ್ರರಾವ ಜಿ ಅವರ ಆದೇಶದ ಮೇರೆಗೆ ಕಲಬುರಗಿ ಜಿಲ್ಲಾ ಘಟಕಕ್ಕೆ ಇವರಿಬ್ಬರನ್ನು ನೇಮಕ ಮಾಡಲಾಗಿದೆ.
ಹಿಂದೂ ಪರಿಷತ್ ಸಂಘಟನೆಯ ತತ್ವಸಿದ್ದಾಂತಕ್ಕೆ ಬದ್ದರಾಗಿ ಜಿಲ್ಲೆಯಲ್ಲಿ ಪತಿಷತ್ತನ್ನು ಬಲಪಡಿಸುವಂತೆ ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಜ್ಯ ಸಂಘಟನಾ ಮಾರ್ಗದರ್ಶಕರು ತಮ್ಮ ನೇಮಕ ಆದೇಶದಲ್ಲಿ ಸೂಚಿಸಿದ್ದಾರೆ.