ಹಿಂದೂ ಧರ್ಮದ ರಕ್ಷಣೆಯೇ ಹಕ್ಕಬುಕ್ಕರ ವಿಜಯನಗರ ಸ್ಥಾಪನೆಗೆ ಪ್ರೇರಣೆ

ಬಳ್ಳಾರಿ ಏ.19, ಭಾರತದ ದೇಶದ ಹತ್ತು ಬಹುಮುಖ್ಯ ಸಾಮ್ರಾಜ್ಯಗಳಲ್ಲಿ ವಿಜಯನಗರವು ಪ್ರಮುಖವಾಗಿದ್ದು, ಉತ್ತರ ಭಾರತದ ಸುಲ್ತಾನರು ಮೇಲಿಂದ ಮೇಲೆ ನಡೆಸುತ್ತಿದ್ದ ದಾಳಿಗಳನ್ನು ತಡೆಗಟ್ಟುವುದು ಮತ್ತು ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿ ಸಂರಕ್ಷಣೆಯ ನಿಟ್ಟಿನಲ್ಲಿ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಲು ಕಾರಣ ಎಂದು ಬಳ್ಳಾರಿಯ ಉಪನ್ಯಾಸಕ ಡಾ.ಕೆ.ಬಸಪ್ಪ ತಿಳಿಸಿದರು.
ಅವರು ನಗರದ ಜಿಲ್ಲಾ ಕುರುಬರ ಸಂಘದ ಸಭಾಂಗಣದಲ್ಲಿ ನಿನ್ನೆ ಸಂಘದಿಂದ ಹಮ್ಮಿಕೊಂಡಿದ್ದ ವಿಜಯನಗರ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ “ಹಕ್ಕಬುಕ್ಕರು ಮತ್ತು ವಿಜಯನಗರ ಸ್ಥಾಪನೆ” ಎಂಬ ವಿಷಯವಾಗಿ ಮಾತನಾಡಿದರು.
ಕ್ರಿ.ಶ.1336ರಲ್ಲಿ ಸಂಗಮ ವಂಶದ ಹರಿಹರ, ಬುಕ್ಕ, ಕಂಪಣ, ಮಾರಪ್ಪ, ಮುದ್ದಪ್ಪ ಎಂಬ ಐವರು ಸಹೋದರರು ಉತ್ತರ ಭಾರತದ ಮುಸ್ಲಿಂ ಸುಲ್ತಾನರನ್ನು ಹಿಮ್ಮೆಟ್ಟಿಸಿ ಹಿಂದೂ ಧರ್ಮದ ರಾಜ್ಯ ರಕ್ಷಣೆಗಾಗಿ ನಿಸ್ವಾರ್ಥವಾದ, ರಾಷ್ಟ್ರಹಿತದ ಮನೋಭಾವದಿಂದ, ಉದಾತ್ತಧ್ಯೇಯವನ್ನು ಹೊಂದಿದ್ದರು. ಹಿಂದೂ ರಾಷ್ಟ್ರ ರಕ್ಷಣೆ, ಭಾರತೀಯ ರೀತಿ ನೀತಿಗಳನ್ನು, ಸನಾತನ ಧರ್ಮವನ್ನು, ಸಂಸ್ಕøತಿಯನ್ನು, ಧರ್ಮ ಪಂಥಗಳನ್ನು ಪೋಷಿಸುವ ದೃಷ್ಟಿಯಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮುಂದಾದರು ಹೇಳಿದರು.
ಬಳ್ಳಾರಿ ಜಿಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷ ಎರಿಸ್ವಾಮಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎರಿಗೌಡ,À ಜಿಲ್ಲಾ ಖಜಾಂಚಿ ಅಲ್ಲಿಪುರ ಕೆ.ಮೋಹನ್, ಸಂಘಟನಾ ಕಾರ್ಯದರ್ಶಿ ಕೆ.ಮಲ್ಲಿಕಾರ್ಜುನ, ನಿರ್ದೇಶಕ ಕೆ.ಸುರೇಂದ್ರ, ತಾಲ್ಲೂಕು ಕನಕ ನೌಕರರ ಸಂಘದ ಅಧ್ಯಕ್ಷ ಅಂಜಿನಪ್ಪ, ಕಸಾಪ ತಾಲ್ಲೂಕು ಅಧ್ಯಕ್ಷ ಕೆ.ಸುಂಕಪ್ಪ, ಕನಕದಾಸರ ಸೇವಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಹಲಕುಂದಿ ವಿಜಯಕುಮಾರ್, ಶಿವಕುಮಾರ್ ಸಂಗನಕಲ್, ಚಂದ್ರ ಸಂಗನಕಲ್, ಶಿಕ್ಷಕರಾದ ಮರಿಸ್ವಾಮಿ, ಕುಮಾರಸ್ವಾಮಿ ಮುಂತಾದವರು ಭಾಗವಹಿಸಿದ್ದರು.