ಹಿಂದೂ ಧರ್ಮದ ತೇಜೋವಧೆ ಖಂಡನೀಯ: ಶಾಸಕ ಮಹೇಶ


ಹುಬ್ಬಳ್ಳಿ,ಸೆ.6: ಹಿಂದೂ ಧರ್ಮದ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದ ಹುಟ್ಟಿನ ಕುರಿತು ಸಚಿವ ಜಿ. ಪರಮೇಶ್ವರ್ ನೀಡಿರುವ ಹೇಳಿಕೆಯನ್ನು ಬಲವಾಗಿ ಖಂಡಿಸಿದರು.
ಒಂದು ಧರ್ಮದವರ ಓಲೈಕೆಗಾಗಿ ಈ ರೀತಿಯ ಹೇಳಿಕೆಗಳನ್ನು ಕೊಡಲಾಗುತ್ತಿದ್ದು, ಐ.ಎನ್.ಡಿ.ಐ.ಎ ಒಕ್ಕೂಟ ಅಸ್ತಿತ್ವಕ್ಕೆ ಬಂದ ನಂತರ ಇಂಥ ಹೇಳಿಕೆಗಳು ಹೆಚ್ಚಾಗಿವೆ ಎಂದು ಕೀಡಿಕಾರಿದರು.
ಹಿಂದೂ ಧರ್ಮದ ಅಂಗವಾಗಿರುವ ಯೋಗ ಇಡೀ ವಿಶ್ವಕ್ಕೆ ಮಾದರಿಯಾಗಿದೆ.
ಹಿಂದೂ ಧರ್ಮದ ಹಲವಾರು ವಿಷಯಗಳಿಗೆ ವಿಶ್ವದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ, ಆದರೆ ಕಾಂಗ್ರೆಸ್ ನಾಯಕರು ಮಾತ್ರ ಹಿಂದೂ ಧರ್ಮದ ಅವಹೇಳನ ಮಾಡುತ್ತಲೇ ಇದ್ದಾರೆ ಎಂದು ಅವರು ನುಡಿದರು.
ಇಂಥ ಹೇಳಿಕೆ ನೀಡುವವರು ಬೇರೆ ಧರ್ಮದ ವಿಚಾರಗಳನ್ನು ಪ್ರಸ್ತಾಪಿಸಲಿ, ಅದನ್ನು ಬಿಟ್ಟು ಹಿಂದೂ ಧರ್ಮದ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ ಎಂದವರು ಹೇಳಿದರು.