ಹಿಂದೂ ಧರ್ಮದಿಂದ ಬೌದ್ಧ ಧರ್ಮ ಸ್ವೀಕಾರ

ವಿಜಯಪುರ, ಡಿ.7-ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ಜಿಲ್ಲಾ ಸಮಿತಿ ವಿಜಯಪುರ ಇವರು ಇಂದು ಸಾರಿಪುತ್ರ ಬುದ್ಧವಿಹಾರದಲ್ಲಿ ನೂರಾರು ಕಾರ್ಯಕರ್ತರು ಬೌದ್ದ ಧರ್ಮವನ್ನು ಸ್ವೀಕರಿಸಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ ಅವರ 65ನೇ ಮಹಾಪರಿನಿರ್ವಾಹಣ ದಿನದಂದು. ನಾವು ಎಲ್ಲ ಕರಾಳ ದಿನವನ್ನಾಗಿ ಆಚರಣೆ ಕರಾಣ ಧರ್ಮವಾದ ಹಿಂದೂಧರ್ಮವನ್ನು ತೇಜಸ್ಸಿದ್ದೇವೆ. ಅದರಂತೆ ಡಾ. ಬಾಬಾಸಾಹೇಬ ಅಂಬೇಡ್ಕರರು ನಾಗಪೂರ ದೀಕ್ಷಾ ಭೂಮಿಯಲ್ಲಿ 1956 ಅಕ್ಟೋಬರ 14 ರ ವಿಜಯದಶಮಿ ಎಂದು ಬೋಧಿಸಿದ 22 ಪ್ರತಿಜ್ಞೆಗಳನ್ನು ರಾಜ್ಯ ಸಂಘಟನಾ ಸಂಚಾಲಕರಾದ ಜಿತೇಂದ್ರ ಕಾಂಬಳೆ ಬೋಧಿಸಿದರು.
ಪ್ರತಿಜ್ಞೇಗಳು ನಾನು ಬ್ರಹ್ಮ, ವಿಷ್ಣು, ಮಹೇಶ್ವರರನ್ನು ದೇವರೆಂದು ನಂಬುವದಿಲ್ಲ. ಮತ್ತು ಆಚರಿಸುವದಿಲ್ಲ ನಾನು ರಾಮ, ಕೃಷ್ಣರನ್ನು ದೇವರೆಂದು ನಂಬುವದಿಲ್ಲ. ಮತ್ತು ಅವರನ್ನು ಪೂಜಿಸುವದಿಲ್ಲ. ಗೌರಿ ಗಣಪತಿ ಇತ್ಯಾದಿ ಹಿಂದೂ ಧರ್ಮದ ಯಾವುದೇ ದೇವ ದೇವತೆಗಳನ್ನು ನಂಬುವದಿಲ್ಲ ಮತ್ತು ಪೂಜಿಸುವುದಿಲ್ಲ. ನಾನು ದೇವರ ಅವತಾರಗಳಲ್ಲಿ ವಿಶ್ವಾಸ ಇಡುವದಿಲ್ಲ ಭಗವಾನ ಬುದ್ಧರನ್ನು ವಿಷ್ಣುವಿನ ಅವತಾರ ಎನ್ನುವುದನ್ನು ನಂಬುವದಿಲ್ಲ ನಾನು ಇಂತಹ ಪ್ರಚಾರವನ್ನು ಮೂರ್ಖತನದ ಮತ್ತು ಅಪಪ್ರಚಾರವೆಂದು ತಿಳಿಯುತ್ತೇನೆ. ನಾನು ಎಂದು ಶ್ರೆದ್ದಾ ಮಾಡುವದಿಲ್ಲ. ಪಿಂಡದಾನ ನೀಡುವದಿಲ್ಲ. ಬೌದ್ದ ಧರ್ಮದ ವಿರುದ್ದವಾದ ಕಾರ್ಯಕ್ರಮಗಳನ್ನು ಮಾಡುವದಿಲ್ಲ. ಯಾವದೇ ಕ್ರಿಯಾ ಸಂಸ್ಕಾರಗಳನ್ನು ಬ್ರಾಹ್ಮಣರಿಂದ ಮಾಡಿಸುವದಿಲ್ಲ ಎಂದು ಬೋಧಿಸಿದರು.
ಈ ಸಂದರ್ಭಧಲ್ಲಿ ಜಿತೇಂದ್ರ ಕಾಂಬಳೆ, ಸಂಜು ಕಂಬಾಗಿ, ಸುಖದೇವ ಮೇಲಿನಕೇರಿ, ಚಂದ್ರು ಮೇಲಿನಕೇರಿ, ಶಂಕರ ಚಲವಾದಿ, ಸಂಗಪ್ಪ ಪಡಗಾರ, ಸುನಂದಾ ದೊಡಮನಿ, ಸಂಗು ಕಿರಸೂರ, ಮಲ್ಲು ಮಡ್ಡಿಮನಿ, ಭೀಮು ಉತ್ನಾಳ ಸೋಮನಾಥ ರಣದೇವಿ, ಯಲ್ಲಪ್ಪ ಕಾಂಬಳೆ, ಹುಚ್ಚಪ್ಪ ಲೋಕೂರ ಮುರಗೇಶ ದೊಡ್ಡ£ಣ್ಣವರ ಮಹಾಂತೇಶ ರಾಠೋಡ ಮುಂತಾದವರು ಉಪಸ್ಥಿತರಿದ್ದರು.