ಹಿಂದೂ ದೇವರ ಚಿತ್ರ ಬಿಡಿಸಿದ ಮುಸ್ಲಿಂ ಮಹಿಳೆ

ಕಲ್ಲಿಕೋಟೆ, ಮಾ. ೯- ಕೇರಳದ ಕಲ್ಲಿಕೋಟೆಯ ಮುಸ್ಲಿಂ ಮಹಿಳೆ ೪೩ ವರ್ಷದ ಸನಮ್ ಫಿರೋಜ್ ಹಿಂದು ದೇವರಾದ ಶ್ರೀಕೃಷ್ಣ, ಗಣೇಶ ಚಿತ್ರಗಳನ್ನು ಬಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಶ್ರೀಕೃಷ್ಣನ ಬಾಲ್ಯದಿಂದ ಗೀತೋಪದೇಶದ ವರೆಗಿನ ಜೀವನದ ಆಧಾರಿತ ಶ್ರೀಕೃಷ್ಣನ ಅವತಾರ ಸರಣಿ ಚಿತ್ರ ಪೇಂಟಿಂಗ್ ಮಾಡಿರುವ ಸನಮ್..ಬಿದಿರಿನ ಕಾಂಡಗಳು,ಮಣ್ಣಿನ ಮಡಕೆಗಳಲ್ಲಿ, ಸೀರೆ, ಚೂಡಿದಾರ್‌ಗಳು, ಶರ್ಟ್‌ಗಳು, ಧೋತಿಗಳಲ್ಲಿ ಗಣೇಶನ ವಿವಿಧ ರೀತಿಯ ಚಿತ್ರಗಳು ಸನಮ್ ಕೈಚಳಕದಲ್ಲಿ ಅರಳಿವೆ.
ಮುಸ್ಲಿಂ ಧರ್ಮದವರಾದರೂ ಎಲ್ಲ ಅಡೆತಡೆಗಳನ್ನು ಮೀರಿ ತನ್ನ ಚಿತ್ರಕಲೆಯಲ್ಲಿ ಹಿಂದೂ ದೇವರಾದ ಶ್ರೀಕೃಷ್ಣ ಮತ್ತು ಗಣೇಶ ವಿವಿಧ ಪ್ರಕಾರದ ಪೇಂಟಿಂಗ್‌ಗಳನ್ನು ಬಿಡಿಸಿ ದೇಶಾದ್ಯಂತ ಮನೆಮಾತಾಗಿದ್ದಾರೆ. ಹಿಂದೂ ಧರ್ಮದ ಶ್ರೀಕೃಷ್ಣ ಮತ್ತು ಗಣೇಶ ವಿವಿಧ ಆಕಾರದ ಚಿತ್ರಗಳನ್ನು ತನ್ನ ಇನ್ಸ್ಟಾಗ್ರಾಂ ಒuಡಿಚಿಟIಟಿಜiಚಿ.iಟಿದಲ್ಲಿ ಪರಿಚಯಿಸಿದ್ದು, ಆ ಪೇಂಟಿಂಗ್ಗಳು ಇದೀಗ ಎಲ್ಲೆಡೆ ಗಮನ ಸೆಳೆದಿದೆ.
ಬಾಲ್ಯದಿಂದಲೂ ಚಿತ್ರ ಬಿಡಿಸುತ್ತಿದ್ದ ಸನಮ್ ಮದುವೆಯ ನಂತರವೂ ಆ ಕಾಯಕವನ್ನು ಮುಂದುವರಿಸಿಕೊಂಡ ಬಂದಿದ್ದಾರೆ. ಸನಮ್ ಬಿಡಿಸುವ ಚಿತ್ರಕಲೆ ಸಂಪ್ರದಾಯವು ಆಕೆಯ ಪೋಷಕ ಶಬೀರ್ ಜಾನ್, ಜುಹ್ರಾ ಅವರಿಂದ ಆನುವಂಶಿಕವಾಗಿ ಬಂದ ಕಲೆಯಾಗಿದೆ. ಆದರೂ ಮೂರು ವರ್ಷಗಳ ಕಾಲ ಖ್ಯಾತ ವರ್ಣಚಿತ್ರಕಾರ ಸತೀಶ್ ತಾಯತ್ ಅವರಿಂದಲೂ ಮ್ಯೂರಲ್ ಪೇಂಟಿಂಗ್ ಕಲಿತರು.
ಗೃಹಿಣಿಯಿಂದ ವರ್ಣಚಿತ್ರಕಾರ ಕಲಾವಿದನ ಹಾದಿಯಲ್ಲಿ ಸಾಗಿದ ಸನಮ್, ತನ್ನ ಆಲೋಚನೆಗಳು ಮತ್ತು ವಿನ್ಯಾಸಗಳನ್ನು ಚಿತ್ರಿಸಲು ವಿಭಿನ್ನ ಮಾಧ್ಯಮಗಳನ್ನು ಬಳಸಿಕೊಂಡಿದ್ದಾರೆ. ಹಿಂದೂ ದೇವರ ಗಣೇಶನೊಂದಿಗೆ ಚಿತ್ರ ಬರೆಯಲೂ ಪ್ರಾರಂಭಿಸಿದ ನಾನು, ನಂತರ ಕೃಷ್ಣನ ಚಿತ್ರ ತೆಗೆಯಲು ಶುರುಮಾಡಿದೆ. ನಾನು ಕೃಷ್ಣನ ವಿವಿಧ ರೂಪಗಳನ್ನು ಚಿತ್ರಿಸಿದ್ದೇನೆ. ಅದು ನನಗೆ ಚಿತ್ರಕಲೆಯಲ್ಲಿ ದೊಡ್ಡ ಶಕ್ತಿ ನೀಡಿತು ಎಂದು ಸನಮ್ ಹೇಳುತ್ತಾರೆ.