ಹಿಂದೂ ಜಾಗೃತಿ ಸೇನೆಯ ಮುಖಂಡರ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿ:ಮಾ.2: ಕಾಳಗಿ ತಾಲೂಕಿನ ರಟಗಲ್ ಗ್ರಾಮದ ನರ್ಸ ಅಶ್ವಿನಿ ಯವರಿಗೆ ರಕ್ಷಣೆ ನೀಡುವ ಕುರಿತು ಮತ್ತು ಕೋಮುವಾದ ಹೆಚ್ಚಿಸುತ್ತಿರುವ ಹಿಂದೂ ಜಾಗೃತಿ ಸೇನೆಯ ಮುಖಂಡರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳಬೇಕೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವಾಯ್‍ಎಫ್‍ಐ) ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಶರಣ ಸೂಫಿ ಸಂತರ ನಾಡಿನಲ್ಲಿ ಜಾತಿವಾದ, ಕೋಮುವಾದಕ್ಕೆ ನಾವು ಜಾಗ ನೀಡುವುದು ಬೇಡ. ಜಾತಿ ಧರ್ಮಗಳನ್ನು ಮೀರಿದ ಮಾನವೀಯತೆ ನಮ್ಮೆಲ್ಲರ ಮೊದಲ ಆದ್ಯತೆ ಆಗಬೇಕು. ಆದರೆ ಕಳೆದ ವಾರ 22-2-2024 ರಂದು ಕಾಳಗಿ ತಾಲೂಕಿನ ರಟಗಲ್ ಗ್ರಾಮದ ನರ್ಸ್ ಶ್ರೀಮತಿ ಅಶ್ವಿನಿ ಅವರ ಮೇಲೆ ಮತಾಂತರದ ಸುಳ್ಳು ಆರೋಪ
ಹೊರಿಸಿ ಕೋಮುವಾದ ಹೆಚ್ಚಿಸಲು ಹಿಂದೂ ಜಾಗೃತಿ ಸೇನೆಯು ಮುಂದಾಗಿದೆ.
ನರ್ಸ್ ಅಶ್ವಿನಿ ಯವರು ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಿರುವ ಸಂಧರ್ಭದಲ್ಲಿ ಹಿಂದೂ ಜಾಗೃತಿ ಸೇನೆಯ ಮುಖಂಡರು ಒತ್ತಾಯಪೂರ್ವಕ ಮನೆಯೊಳಗೆ ಬಂದು ಪೂಜೆ ಮಾಡುತ್ತಿರುವ ಅಶ್ವಿನಿ ಹಾಗೂ ಸಂಗಡಿಗರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮನೆಯೊಳಗೆ ಒತ್ತಾಯಪೂರ್ವಕ ನುಗ್ಗಿ ಅವರನ್ನು ಪೂಜೆ ಮಾಡುತ್ತಿರುವ ಕೋಣೆಯಿಂದ ಹೊರದೂಡುವುದಲ್ಲದೇ ನೀವು ಮತಾಂತರ ಮಾಡುತ್ತಿದ್ದೀರಿ ಎಂದು ಅವರಿಗೆ ಬೆದರಿಕೆ ಹಾಕಿದ್ದಾರೆ.
ಅದಾದ ನಂತರ ಅಶ್ವಿನಿ ಯವರು ತಮ್ಮ ಕೆಲಸಕ್ಕೆಂದು ಹೋಗುವಾಗ ಮತ್ತೆ ಅವರಿಗೆ ಜೀವ ಬೆದರಿಕೆ ನೀಡಿದ್ದಾರೆ. ಅಶ್ವಿನಿ ಯವರು ಅಟ್ರಾಸಿಟಿ ಕೇಸನ್ನು ದಾಖಲಿಸಿದ್ದಾರೆ ಆದರೆ ಪೆÇೀಲೀಸರು ಇದರ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಅಶ್ವಿನಿ ಯವರಿಗೆ ಜೀವ ಬೆದರಿಕೆ ಇರುವುದರಿಂದ ಅವರಿಗೆ ರಕ್ಷಣೆ ನೀಡಬೇಕು. ಜಿಲ್ಲಾಡಳಿತ ತಕ್ಷಣ ಕಾರ್ಯಪ್ರವೃತ್ತರಾಗಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸುತ್ತೇವೆ. ಧರ್ಮದ ಹೆಸರಲ್ಲಿ ನಾಡಿನ ಸೌಹಾರ್ಧತೆಯನ್ನು ಕದಡುತ್ತಿರುವ ಕೋಮುವಾದಿಗಳನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಸಂಚಾಲನಾ ಸಮಿತಿ ಲವಿತ್ರ, ನಾಗರಾಜ, ನಾಗಮ್ಮ, ಆಕಾಶ ಚಿಂಚನಸೂರ, ಕಮಲಾಕರ, ಕೃಷ್ಣಪ್ಪ ಧನ್ನಿ ಇದ್ದರು.