ಹಿಂದೂ ಕಾರ್ಯಕರ್ತರ ವಿರುದ್ದ ದುರುದ್ದೇಶ ಪೂರ್ವಕ ದಾಖಲಿಸಿದ ಪ್ರಕರಣ ರದ್ದುಗೊಳಿಸಿ.

ಸಿಂಧನೂರು.ಅ.೧೦- ಹಿಂದೂ ಕಾರ್ಯಕರ್ತರ ಮೇಲೆ ದುರುದ್ದೇಶ ಪೂರ್ವಕವಾಗಿ ದಾಖಲಿಸಿದ ಪ್ರಕರಣ ವನ್ನು ರದ್ದು ಪಡಿಸುವಂತೆ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿ ಗಳಿಗೆ ಹಿಂದೂ ಜಾಗರಣ ವೇದಿಕೆ ಸಿಂಧನೂರು ತಾಲೂಕ ಘಟಕದ ವತಿಯಿಂದ ಮನವಿಯನ್ನು ಸಲ್ಲಿಸಿದರು.
ಗಂಗಾವತಿ ನಗರದಲ್ಲಿ ಸಪ್ಟೆಂಬರ್ ೨೮ ರಂದು ಗಣೇಶ ವಿಸರ್ಜನೆ ವೇಳೆಯಲ್ಲಿ ಸಂಪ್ರದಾಯ ಬದ್ದವಾಗಿ ಆರತಿ ಬೆಳಗುವುದು ಈ ಮೊದಲಿಂದಲೂ ನಡೆಯುತ್ತಾ ಬಂದಿದೆ.ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಉದ್ದೇಶದ ಪ್ರಯತ್ನದಿಂದ ದುರುದ್ದೇಶ ಪೂರ್ವಕ ವಾಗಿ ನಮ್ಮ ನಂಬಿಕೆಗೆ ದಕ್ಕೆ ತಂದಿರುತ್ತಾರೆ .ಇಷ್ಟು ವರ್ಷಗಳಿಂದ ಇಲ್ಲದ ಕೇಸು ಈಗ ಮಾಡಿರುವುದು ಉದ್ದೇಶ ವಾದರೂ ಏನು ? ಹನುಮ ನಾಡಿನಲ್ಲಿ ಜೈ ಶ್ರೀ ರಾಮ್ ಹಾಗೂ ಭಾರತ್ ಮಾತಾಕಿ ಜೈ ಕೂಗುವುದು ತಪ್ಪೆಂದರೇ ಹೇಗೆ ..? ಉತ್ಸವದುದ್ದಕ್ಕೂ ದಾಖಲಿಸಿರುವ ವಿಡಿಯೋ ಗಳನ್ನು ಸೂಕ್ತವಾಗಿ ಪರಿಶೀಲಿಸಬೇಕು ಅನ್ಯ ಧರ್ಮೀಯರ ಭಾವನೆಗಳಿಗೆ ದಕ್ಕೆ ತರುವ ಯಾವುದೇ ಘೋಷಣೆ ಗಳನ್ನು ಕೂಗಿಲ್ಲ .ಮುಂಚೂಣಿಯಲ್ಲಿರುವ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ ಪೋಲಿಸ್ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಭಾಗವಾಗಿ ರಾಯಚೂರು ಜಿಲ್ಲೆಯಲ್ಲಿ ಶಾಂತಿ ಕಾಪಾಡಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಮಲ್ಲಯ್ಯ ,ಗಿರೀಶ್ ವಕೀಲರು, ಸತೀಶ, ಶ್ರೀಕಾಂತ್, ರಾಜೇಶ, ಸಿದ್ದು, ಕಾರ್ತಿಕ, ಮಣಿಕಂಠ,ವಿರೇಶ ಹಿರೇಮಠ, ಅವಿನಾಶ್, ಸುದೀಪ್, ರಾಕೇಶ್ ಸೇರಿದಂತೆ ಹಲವಾರು ಮನವಿಯನ್ನು ಸಲ್ಲಿಸಿದರು.