ಹಿಂದೂ ಏಕತಾ ಯಾತ್ರೆಗೆ ತೆರಳುತ್ತಿದ್ದಾಗ ಅದಾ ಶರ್ಮಾ ಮತ್ತು ಸುದೀಪ್ತೋ ಸೇನ್ ಕಾರು ಅಪಘಾತ ’ಕೇರಳ ಸ್ಟೋರಿ’ ಇಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ

’ದಿ ಕೇರಳ ಸ್ಟೋರಿ’ ಫಿಲ್ಮ್ ನ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಸೋಮವಾರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಯಿತು. ಪತ್ರಕರ್ತ ಕುರ್ಬನ್ ಅಲಿ ಮತ್ತು ಜಮಿಯತ್ ಉಲೇಮಾ-ಎ-ಹಿಂದ್ ಅವರು ಫಿಲ್ಮ್ ನ ಬಿಡುಗಡೆಯನ್ನು ತಡೆಯುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಮೇ ೫ ರಂದು ಕೇರಳ ಹೈಕೋರ್ಟ್ ಚಿತ್ರದ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿತ್ತು. ನಂತರ ಅರ್ಜಿದಾರರು ಹೈಕೋರ್ಟ್‌ನ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಈ ನಡುವೆ ಮೇ ೧೪, ಭಾನುವಾರ, ’ದಿ ಕೇರಳ ಸ್ಟೋರಿ’ ನಿರ್ದೇಶಕ ಸುದೀಪ್ತೋ ಸೇನ್ ಮತ್ತು ನಟಿ ಅದಾ ಶರ್ಮಾ ಹಿಂದೂ ಏಕತಾ ಯಾತ್ರೆಗಾಗಿ ಕರೀಂನಗರಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಗಾಯಗೊಂಡಿದ್ದಾರೆ. ನಿನ್ನೆ ಇಬ್ಬರೂ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟಿ ಅದಾ ಶರ್ಮಾಗೆ ಸಂಬಂಧಿಸಿದ ಸುದ್ದಿಯೊಂದು ಹೊರಬಿದ್ದಿದೆ. ‘ದಿ ಕೇರಳ ಸ್ಟೋರಿ’ ನಟಿ ಹಾಗೂ ನಿರ್ದೇಶಕ ಸುದೀಪ್ತೋ ಸೇನ್ ಹೋಗುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ . ಈ ಸುದ್ದಿಯ ನಂತರ, ನಟಿ ಸ್ವತಃ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
’ದಿ ಕೇರಳ ಸ್ಟೋರಿ’ ಖ್ಯಾತಿಯ ನಟಿ ಅದಾ ಶರ್ಮಾ ತಮ್ಮ ಫಿಲ್ಮ್ ನ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಟ್ರೇಲರ್ ಬಿಡುಗಡೆಯಾದಾಗಿನಿಂದ ಫಿಲ್ಮ್ ನ ಬಗ್ಗೆ ವಿವಾದ ಶುರುವಾಗಿತ್ತು. ಒಂದೆಡೆ ಚಿತ್ರಕ್ಕೆ ಕೆಲವರು ಬೆಂಬಲ ನೀಡುತ್ತಿದ್ದಾರೆ. ಇನ್ನೊಂದೆಡೆ ಚಿತ್ರದ ವಿರುದ್ಧ ಕೆಲವರು ಹರಿಹಾಯ್ದಿದ್ದಾರೆ. ಇದೆಲ್ಲದರ ನಡುವೆ ಫಿಲ್ಮ್ ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ.
ಹಿಂದೂ ಏಕತಾ ಯಾತ್ರೆಗೆ ಹೊರಟಿದ್ದರು:
ಈ ಮಧ್ಯೆ ಸುದೀಪ್ತೋ ಸೇನ್ ಅವರ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಬಂತು. ಮೇ ೧೪ ರಂದು ಇಬ್ಬರೂ ಸಣ್ಣ ರಸ್ತೆ ಅಪಘಾತಕ್ಕೆ ಒಳಗಾದರು. ಅದಾ ಶರ್ಮಾ ಮತ್ತು ಸುದೀಪ್ತೋ ಸೇನ್ ಕರೀಂನಗರಕ್ಕೆ ಹಿಂದೂ ಏಕತಾ ಯಾತ್ರೆಗೆ ತೆರಳುತ್ತಿದ್ದರು. ಈ ವೇಳೆ ಅವರಿಬ್ಬರ ಕಾರು ಅಪಘಾತಕ್ಕೀಡಾಗಿದೆ. ಈ ಸುದ್ದಿ ಹೊರಬಂದ ಕ್ಷಣದಿಂದ, ಕೇರಳ ಸ್ಟೋರಿ ಫಿಲ್ಮ್ ನ ಬೆಂಬಲಿಗರು ಇಬ್ಬರ ಬಗ್ಗೆಯೂ ಚಿಂತಿತರಾಗಿದ್ದರು. ನಿನ್ನೆ ನಟಿ ತಮ್ಮ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಅಪ್‌ಡೇಟ್ ನೀಡಿದ್ದಾರೆ.
ಅದಾ ಶರ್ಮಾ ಟ್ವೀಟ್ ಮಾಡಿ, “ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ನಮ್ಮ ಅಪಘಾತದ ಸುದ್ದಿ ಪ್ರಸಾರವಾಗುತ್ತಿರುವುದರಿಂದ ಅನೇಕರಿಂದ ಆತಂಕದ ಸಂದೇಶಗಳು ಬರುತ್ತಿವೆ. ಈವಾಗ ಇಡೀ ತಂಡ, ನಾವೆಲ್ಲರೂ ಚೆನ್ನಾಗಿದ್ದೇವೆ, ಗಂಭೀರವಾಗಿ ಏನೂ ಗಾಯಗಳಾಗಿಲ್ಲ, ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು.” ಅದಾ ಶರ್ಮಾ ಅವರ ಈ ಟ್ವೀಟ್‌ಗೆ ಜನರು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.
ಮೇ ೧೪, ಭಾನುವಾರ, ’ದಿ ಕೇರಳ ಸ್ಟೋರಿ’ ನಿರ್ದೇಶಕ ಸುದೀಪ್ತೋ ಸೇನ್ ಮತ್ತು ನಟಿ ಅದಾ ಶರ್ಮಾ ಕರೀಂನಗರದಲ್ಲಿ ಹಿಂದೂ ಏಕತಾ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆ ಸಮಯ ಇವರ ತಂಡವು ರಸ್ತೆ ಅಪಘಾತವನ್ನು ಎದುರಿಸಿ ಅವರು ಗಾಯಗೊಂಡರು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಅದಾ ಶರ್ಮಾ ತನ್ನ ಮತ್ತು ನಿರ್ದೇಶಕರ ಬಗ್ಗೆ ವಿಶೇಷ ಆರೋಗ್ಯ ವಿಷಯವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಘಟನೆ ನಡೆದ ರಾತ್ರಿಗೆ, ಅದಾ ಶರ್ಮಾ ಇಡೀ ವಿಷಯವನ್ನು ಸ್ಪಷ್ಟಪಡಿಸಿದರು ಮತ್ತು ತನ್ನ ಬಗ್ಗೆ ಚಿಂತಿಸಬೇಡಿ ಎಂದು ತನ್ನ ಅನುಯಾಯಿಗಳಿಗೆ ಕೇಳಿಕೊಂಡರು.
ಅತ್ತ ಸುದೀಪ್ತೋ ಸೇನ್ ಅವರೂ ಆರೋಗ್ಯ ಅಪ್ಡೇಟ್ ನೀಡಿದರು.
ಕೆಲವು ’ವೈದ್ಯಕೀಯ ತುರ್ತು’ ಕಾರಣದಿಂದ ಸುದೀಪ್ತೋ ಅವರು ಏಕತಾಯಾತ್ರೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಖಚಿತಪಡಿಸಿದ್ದರು.
“ಕರೀಂನಗರದ ಜನತೆಯಲ್ಲಿ ಹೃತ್ಪೂರ್ವಕ ಕ್ಷಮೆಯಾಚಿಸುತ್ತೇನೆ. ಹೆಣ್ಣು ಮಕ್ಕಳನ್ನು ಉಳಿಸಿ ಎಂಬ ಕಾರಣಕ್ಕೆ ಈ ಸಿನಿಮಾ ಮಾಡಿದ್ದೇವೆ. ದಯವಿಟ್ಟು ನಮ್ಮ ಹಿಂದೂ ಏಕತಾ ಯಾತ್ರೆಗೆ ಬೆಂಬಲ ನೀಡಿ.” ಎಂದಿರುವರು.
ದಿ ಕೇರಳ ಸ್ಟೋರಿ ಈಗಾಗಲೇ ನೂರು ಕೋಟಿ ಕ್ಲಬ್ ದಾಟಿದೆ. ಫಿಲ್ಮ್ ಮೇ ೫ ರಂದು ಬಿಡುಗಡೆಯಾಯಿತು. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ’ಪಠಾಣ್’, ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ’ತು ಜೂಠೀ… ’ ನಂತರ ಕೋಟಿ ದಾಟಿದ ನಾಲ್ಕನೇ ಫಿಲ್ಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.