ಹಿಂದೂಸ್ಥಾನಿ ಸಂಗೀತದಲ್ಲಿ
 ವಿದ್ವತ್ ಪಡೆದ ಸಾಯಿಶೃತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.17: ರಂಗಭೂಮಿಯ ಖ್ಯಾತ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರ ಪುತ್ರಿ ಸಾಯಿಶೃತಿ ಹಂದ್ಯಾಳ್ ಅವರು ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ನಡೆದ ಪರೀಕ್ಷೆಯಲ್ಲಿ ಹಿಂದುಸ್ತಾನಿ ಸಂಗೀತದ ವಿದ್ವತ್ ಪದವಿಯ ಅಂತಿಮ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಗದಗನ ಬಾಷಲ್ ಮಿಷನ್ ಹೈಸ್ಕೂಲ್ ನಲ್ಲಿ  ಪರೀಕ್ಷೆ ನಡೆದಿದ್ದವು.‌ ಶಾಸ್ತ್ರ ಮತ್ತು ಪ್ರಯೋಗ ವಿಷಯಗಳಲ್ಲಿ 500 ಅಂಕಗಳಿಗೆ 438 ಅಂಕಪಡೆದಿದ್ದಾರೆ.
ಈಗಾಗಲೇ ಕಾರ್ಯಕ್ರಮಗಳನ್ನು ವಿವಿದಢೆ ನೀಡಿದ್ದು ಉತ್ತಮ ಗಾಯಕಿಯಾಗಿ ಹೊರ ಹೊಮ್ಮಿದ್ದಾರೆ.