ಹಿಂದೂರುದ್ರಭೂಮಿ ಜಾಗಕ್ಕೆ ಕಾಂಪೌಂಡ್ ಕಾಮಗಾರಿಗೆ ಭೂಮಿಪೂಜೆ

ದಾವಣಗೆರೆ.ಏ.೨೩; ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 1ರಲ್ಲಿ ಮಹಾನಗರ ಪಾಲಿಕೆ ವತಿಯಿಂದ 2020-21ನೇ ಸಾಲಿನಲ್ಲಿ 15ನೇ ಹಣಕಾಸು ಅನುದಾನದಡಿ 50ಲಕ್ಷ ರೂ.ಗಳ ವೆಚ್ಚದ ಹಮ್ಮಿಕೊಂಡಿರುವ ದೊಡ್ಡಬೂದಿಹಾಳ್ ಸರ್ವೇ ನಂಬರ್ 112ರ ಹಿಂದೂರುದ್ರಭೂಮಿ ಜಾಗಕ್ಕೆ ಕಾಂಪೌಂಡ್ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇತ್ತೀಚೆಗೆಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಭೂಮಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ಎ.ನಾಗರಾಜ್, ವಾರ್ಡ್ ಸದಸ್ಯ ಜಿ.ಡಿ.ಪ್ರಕಾಶ್ ಮಹಾನಗರ ಪಾಲಿಕೆ ಅಧಿಕಾರಿ,ನೌಕರ ವರ್ಗದವರು ಉಪಸ್ಥಿತರಿದ್ದರು.