ಹಿಂದೂಗಳ ವೈಭವದ ನಗರ ವಿಜಯಪುರ

ವಿಜಯಪುರ: ಮಾ.23:ಹಿಂದೂಗಳ ಅತ್ಯಂತ ವೈಭವದ ನಗರ ವಿಜಯಪುರ ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು.
ಹನುಮಗಿರಿ ರಸ್ತೆಯ ಖಣಿ ಹತ್ತಿರದ ಮೋಹನ ನಗರದಲ್ಲಿ ಬುಧವಾರ ವೆಂಕಟೇಶ್ವರ ದೇವಸ್ಥಾನದ ಗೀತಾ ಭವನ ಹಾಗೂ ವಾನಪ್ರಸ್ಥಧಾಮ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರದಲ್ಲಿ ಅನೇಕ ದೇವಸ್ಥಾನಗಳನ್ನು ದಾಳಿ ಮಾಡಿದ ಕಾಲದಲ್ಲಿ ನಾಶಪಡಿಸಲಾಗಿದೆ. ನಗರದಲ್ಲಿ ಎಲ್ಲಿಯೇ ಉತ್ಖನನ ಮಾಡಿದರೂ ಹಿಂದು ಕುರುಹು ಸಿಗುವ ನಗರ ವಿಜಯಪುರ ಎಂದರು.
ಆದಿಲ್ ಶಾಹಿ ಹೋಟೆಲ್ ಬಳಿಯ ಯಾದವರ ಕಾಲದಲ್ಲಿ ಸ್ವಯಂ ಶಂಭುಲಿಂಗ ಪ್ರತಿಷ್ಠಾಪನೆ ಆಗಿದೆ ಎನ್ನುವುದು ಈಚೆಗೆ ಭೇಟಿ ನೀಡಿದಾಗ ತಿಳಿಯಿತು. ಅದನ್ನು ಮಸೀದಿಯಾಗಿ ಪರಿವರ್ತಿಸಲು ಯತ್ನಿಸಿದ್ದರು ಸಫಲರಾಗಿಲ್ಲ. ಅಲ್ಲಿ ಅದರ ಉತ್ಖನನ ಮಾಡಲು ಎ.ಎಸ್.ಐ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಅಧಿಕಾರಿಗಳು ನಗರಕ್ಕೆ ಭೇಟಿ ನೀಡಿದ್ದು, ಶೀಘ್ರ ಉತ್ಖನನ ಮಾಡಿ, ಪೂಜೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಇದರ ಬಳಿಕ ಮಸೀದಿ ಅಂತ ಬ್ರಿಟಿಷರು ಡಿಕ್ಲೆರ್ ಮಾಡಿರುವ ನರಸಿಂಹ ದೇವಾಲಯ ನಮ್ಮ ಸೂಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಣ್ಣ ಸಂಸ್ಥೆಗಳಿಂದಲೇ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ. ವ್ಯಕ್ತಿಗತ ಯಾರು, ಏನನ್ನು ಮಾಡಲಾಗದು. ರಾಜಕಾರಣಿಗಳು ಅಧಿಕಾರ ಇರುವತನಕ ಅಭಿಮಾನಿಗಳ ಕಟ್ಟಿಕೊಂಡು ಏನರೇ ಮಾಡುತ್ತಾರೆ. ಮಾಜಿ ಆದ ಮೇಲೆ ಅವರು ಇರುವುದಿಲ್ಲ. ಸಂಘ ಇರುವುದಿಲ್ಲ. ಆಚಾರ್ಯರು ವಾನಪ್ರಸ್ಥಧಾಮ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಅದರ ಅಭಿವೃದ್ಧಿಗಾಗಿ ರೂ.10 ಲಕ್ಷ ನೀಡುವುದಾಗಿ ಹೇಳಿದರು.
ನಾವು ಸಿದ್ದೇಶ್ವರ ಸಂಸ್ಥೆ ಮೂಲಕ ಗೋಶಾಲೆ, ಶಾಲೆ, ಆಸ್ಪತ್ರೆ ಮತ್ತಿತರೆ ಸೇವಾ ಚಟುವಟಿಕೆ ಮಾಡುತ್ತಿದ್ದೇವೆ. ಸಿದ್ಧಸಿರಿ ಬ್ಯಾಂಕ್ ಎಥೆನಾಲ್ ಕಾರ್ಖಾನೆ, ಸಿದ್ದಸಿರಿ ಬ್ಯಾಂಕ್ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಲಾಗಿದೆ. ನಮ್ಮ ಮೇಲಿನ ವಿಶ್ವಾಸದಿಂದ ಸಿದ್ದಸಿರಿ ಬ್ಯಾಂಕ್ ಗೆ 2500 ಕೋಟಿ ಠೇವಣಿ ಇಟ್ಟಿದ್ದಾರೆ. ನಮ್ಮದು ಉತ್ತರ ಕರ್ನಾಟಕದಲ್ಲೇ ನಂಬರ್ ಒನ್ ಸ್ಥಾನದಲ್ಲಿ ಇರುವುದು ಹೆಮ್ಮೆಯ ವಿಷಯ ಎಂದರು.
ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಸರ್ವಜ್ಞ ವಿಹಾರ ವಿದ್ಯಾ ಪೀಠದ ಕುಲಪತಿ ಪಂ.ಮೋಕಾಶಿ ಮದ್ವಾಚಾರ್ಯ, ಪಸು ಸಂಗೋಪನಾ ಇಲಾಖೆ ನಿವೃತ್ತ ಉಪನಿರ್ದೇಶಕ ಪ್ರಾಣೇಶ ಜಾಹಾಗಿರದಾರ, ಸಂಜೀವ ಆಚಾರ್ಯ ಮದಭಾವಿ ಮತ್ತಿತರರು ಇದ್ದರು.