ಹಿಂದು‌ ಮುಸ್ಲಿಂ ದ ಭಾವೈಕ್ಯದ ಗಣೇಶೋತ್ಸವ ಆಚರಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.8- ನಗರದ 20ನೇ ವಾರ್ಡಿನ ಸದಾಶಿವನಗರದಲ್ಲಿರುವ ಜಂಡ ಕಟ್ಟೆ ಹತ್ತಿರ ಸ್ನೇಹ ಕಲಾ ಸಂಘದ ವತಿಯಿಂದ ಹಿಂದೂ ಮುಸ್ಲಿಂ ಸಮುದಾಯದವರು ಸೇರಿ ವಿಘ್ನೇಶ್ವರನನ್ನು ಪ್ರತಿಷ್ಠಾಪಿಸಿದ್ದು ವಿಜೃಂಭಣೆಯಿಂದ ಆಚರಿಸಲಾಯಿತು.
ತಾಲೂಕಿನ 20ನೇ ವಾರ್ಡಿನಲ್ಲಿ ಯುವಕರು ಜಾತಿ ಭೇದ ಭಾವ ಮರೆತು ಪ್ರತಿವರ್ಷ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಿಂದೂ-ಮುಸ್ಲಿಂ ನಾವೆಲ್ಲ ಒಂದೇ ಎಂಬುವ ಭಾವೈಕ್ಯತೆ ಮೂಡಿಸುತ್ತ ಹಬ್ಬವನ್ನು ಆಚರಿಸುತ್ತಿದ್ದಾರೆ .
ಸ್ನೇಹ ಕಲಾಸಂಘದ ಸದಸ್ಯರಾದ ಎನ್ ‌.ನಾಗರಾಜ್, ವಿನೋದ್ ಕುಮಾರ್. ಟಿ, ಶ್ರೀನಿವಾಸ್ ನಾಯಕ್. ವೆಂಕಟೇಶ್ .ರಾಜೇಶ್ .ಸುರೇಶ್ ಕುಮಾರ್. ಮುಲ್ಲಾ. ದಾದು .ಸೋಹಿಲ್. ಮೌಲಾ ಹಿಂದೂ ಮುಸ್ಲಿಂ ಯುವಕರು ಹಿರಿಯರು ಬಾಂಧವರು ಇದ್ದರು.