ಹಿಂದುಳಿದ ಸಮುದಾಯಗಳು ಚಲನಶೀಲವಾದಾಗ ರಾಜ್ಯ ಶ್ರೀಮಂತವಾಗಿರಲು ಸಾಧ್ಯ


ದಾವಣಗೆರೆ.ಆ.೧; ಹಿಂದುಳಿದ ಸಮುದಾಯಗಳು ಚಲನಶೀಲವಾದಾಗ ರಾಜ್ಯ ಶ್ರೀಮಂತವಾಗಿರಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದ ಶಿವಯೋಗಾಶ್ರಮದಲ್ಲಿ ಬೋವಿ ಸಮಾಜದಿಂದ ಹಮ್ಮಿಕೊಂಡಿದ್ದ ಶ್ರೀ ಸಿದ್ದರಾಮೇಶ್ವರ ದೇವರ ರಥದ ವಜ್ರ ಮಹೋತ್ಸವಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸರ್ಕಾರಗಳು ಹಿಂದುಳಿದ ವರ್ಗದವರನ್ನು ಶ್ರೀಮಂತವಾಗುವಂತೆ ಮಾಡಬೇಕು ಆಗ ರಾಜ್ಯ ಶ್ರೀಮಂತವಾಗಲು ಸಾಧ್ಯ. ತಳ ಸಮುದಾಯದ ಕ್ಕೆ ವಿಶೇಷ ಕಾರ್ಯಕ್ರಮ ನೀಡಬೇಕು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದ ಸಮುದಾಯಗಳಿಗೆ ಸಾಕಷ್ಟು ಅನುದಾನಗಳನ್ನು ನೀಡಿದೆ. ಬೊವಿ ಸಮಾಜಕ್ಕೆ ಕುಲಕಸುಬು ಮಾಡಲು ಕಾನೂನಾತ್ಮಕ ಸಮಸ್ಯೆಯಿದೆ.  ಪಾರಂಪರಿಕವಾಗಿ ಬಂದ ಕಸುಬಿಗೆ ಅಲ್ಲೋಲ್ಲ ಕಲ್ಲೋಲವಾಗುವಂತಹ ಕಾನೂನುಗಳಿವೆ ಅಲ್ಲದೇ ಅಧಿಕಾರಿಗಳ ತೊಂದರೆ ಇದೆ ಎಂದು ತಿಳಿದು ಬಂದಿದೆ ಇದಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದರು. ಬೋವಿ ಜನಾಂಗದ ಕಸುಬಿಗೆ ವಿಶೇಷ ರಿಯಾಯಿತಿ ನೀಡಿ ಯಾರೂ ತೊಂದರೆ ನೀಡದ ವ್ಯವಸ್ಥೆ ಮಾಡಲಾಗುವುದು. ಕುಲಕಸುಬಿನಿಂದ ಬೋವಿ ಸಮಾಜ   ದೇಶ ಕಟ್ಟುವ ಕೆಲಸ ಮಾಡಿದೆ. ಬಂಡೆ ಹೊಡೆಯದಿದ್ದರೆ ಮನೆ ಮಂದಿರ ದೇವರ ಮೂರ್ತಿ,ರಸ್ತೆ ಡ್ಯಾಂ ಮಾಡಲು ಸಾಧ್ಯವಿಲ್ಲ ಇದರ ಅರಿವು ಇರಬೇಕು. ಯಾವುದೇ ಕಾನೂನು ಮಾಡುವಾಗ ಸಮುದಾಯಗಳಿಗೆ ಯಾವುದೇ ತೊಂದರೆಯಾಗದ ರೀತಿ ಕಾನೂನು ಮಾಡಬೇಕು.ಸಮುದಾಯದ ಜೊತೆ ನಿರಂತ ಸಂಪರ್ಕವಿದೆ ಕಷ್ಟಗಳು ಗೊತ್ತಿದೆ. ಸಮಸ್ಯೆ ಅರಿತು ಕಾನೂನು ಬದಲಾವಣೆ ಮಾಡಲಾಗುವುದು. ಬೊವಿ ಸಮಾಜದ ಹಲವಾರು ಯುವಕರು ಬುದ್ದಿವಂತರಿದ್ದಾರೆ ಐಎಎಸ್ ಐಪಿಎಸ್ ಮಾಡುತ್ತಿದ್ದಾರೆ. ನಾಡನ್ನು ನಡೆಸಬೇಕಾದರೆ ಬಡ ಜನರ ಸಮಸ್ಯೆ ಗೊತ್ತಿರುವವರು ಬೇಕು.ಬೊವಿ‌ಕುಲದ ಮಕ್ಕಳು ಎಲ್ಲಾ ಕಸುಬಿನಲ್ಲಿ‌ ಮುಂದೆ ಬರಬೇಕು ೨೧ ನೇ ಶತಮಾನ ಬದಲಾವಣೆಯ ಶತಮಾನವಾಗಿದೆ. ಭೂಮಿ ಇದ್ದರೆ ಅಲ್ಲ ಜ್ಞಾನ ಇದ್ದರೆ ಬದಲಾವಣೆ ಸಾಧ್ಯ.ಬೋವಿ ಸಮಾಜದ ಯುವಕರಿಗೆ ಅವಕಾಶ ಕೊಟ್ಟರೆ ಎಲ್ಲರನ್ನೂ ಮೀರಿಸುವ ಶಕ್ತಿ ಇದೆ ಉನ್ನತ ಅಂಕ ಪಡೆದು ಉತ್ತಮ ಸ್ಥಾನ‌ಗಳಿಸಲು ಸಾಧ್ಯ.ಸಮುದಾಯ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಬೇಕು ಜ್ಞಾನ ಬೇಕು.ಇದನ್ನು ಮನಗಂಡು ಎಸ್ಸಿ ಎಸ್ಟಿ ಸಮುದಾಯಕ್ಕೆ ಹೆಚ್ವಿನ ಅನುದಾನ ನೀಡಿದೆ
ಈಗಾಗಲೇ ೧೦೭ ಕೊಟಿ ಅನುದಾನ ಬೋವಿ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ ಅನುದಾನ ನೀಡುವಲ್ಲಿ ಸಮುದಾಯಕ್ಕೆ ಕೆಲ ಅಧಿಕಾರಿಗಳು ವಂಚನೆ ಮಾಡಿದ್ದಾರೆ.ಬೋವಿ ನಿಗಮದ ಅಧ್ಯಕ್ಷರ ಬದಲಾವಣೆ ಶೀಘ್ರವಾಗಿ ಮಾಡಲಾಗುವುದು ಎಂದರು.ದೇಶ ಕಟ್ಟುವವರು ಬಂಡವಾಳಶಾಹಿಗಳಲ್ಲ .ತಳಸ್ತರದ ಶ್ರಮ ಜೀವಿಗಳು ದೇಶಕಟ್ಟುವವರು.
ಇಂದಿನ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಜನ ಬಹಳ‌ಬುದ್ದಿವಂತರು. ಯಾರು ಮಾತನಾಡಿದಂತೆ ನಡೆಯುತ್ತಾರೋ ಅವರನ್ನು ಜನ ಕೈಬಿಡುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.  ದೇವರು ಕೂಲಿಕಾರನ ಶ್ರಮದಲ್ಲಿ ರೈತರ ಬೆವರಿನಲ್ಲಿದ್ದಾರೆ ಯಾರು ಉತ್ತಮ ಕೆಲಸ ಮಾಡುತ್ತಾರೆ ಅವರಿಗೆ ನಿಮ್ಮ ಬೆಂಬಲ ಇರಲಿ ಕಾಯಕ ಶ್ರಮದ ಸಮುದಾಯದಕ್ಕೆ ಸಕಲ ಬೆಂಬಲ ನೀಡಲಾಗುವುದು ಎಂದರು.ವೇದಿಕೆಯಲ್ಲಿ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು,ನಿರಳಜನಾನಂದ ಪುರಿ ಶ್ರೀ, ವಚನಾನಂದ ಶ್ರೀ, ಅಭಿನವ ಹಾಲಸ್ವಾಮಿಗಳು,ಬಸವಪ್ರಭು ಶ್ರೀ,ಶಾಂತವೀರ ಶ್ರೀ,ಪುರುಷೋತ್ತಮಾನಂದ ಪುರಿ ಶ್ರೀ ಸೇರಿದಂತೆ  ವಿವಿಧ ಮಠಾಧೀಶರು ಸಾನಿಧ್ಯ ವಹಿಸಿದ್ದರು.
ಸಂಸದ ಜಿ.ಎಂ‌.ಸಿದ್ದೇಶ್ವರ್,ಸಚಿವರುಗಳಾದ ಡಾ.ಸುಧಾಕರ್,ಶಿವರಾಜ್ ತಂಗಡಗಿ,ಭೈರತಿ ಬಸವರಾಜ್,ಶಾಸಕರುಗಳಾದ ಎಸ್ ಎ ರವೀಂದ್ರನಾಥ್,ರೇಣುಕಾಚಾರ್ಯ, ಎಸ್ ವಿ ರಾಮಚಂದ್ರ, ಗೂಳಿಹಟ್ಟಿ ಶೇಖರ್,ಪ್ರೊ.ಲಿಂಗಣ್ಣ,ಎಂ.ಚಂದ್ರಪ್ಪ,ಸಾಲುಮರದ ತಿಮ್ಮಕ್ಕ, ಬೋವಿ ಸಮಾಜದ ಮುಖಂಡರಾದ ಡಿ.ಬಸವರಾಜ್, ರವಿ ಮತ್ತಿತರರಿದ್ದರು.