ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಆರ್ಥಿಕ ನೆರವಿಗೆ ಮನವಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು26: ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಶೀಘ್ರ ಸಾಲ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ದೇವರಾಜ್ ಅರಸು ತಾಲೂಕು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಂಘದಿಂದ ಶಾಸಕ ಎಚ್.ಆರ್.ಗವಿಯಪ್ಪ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಹಿಂದಿನ ಸರಕಾರದಲ್ಲಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ನಾನಾ ಸಮುದಾಯಗಳಿಗೆ ಸಾಲ ಮುಂಜುರು ಮಾಡಲು ಫಲಾನುಭವಿಗಳ ಆಯ್ಕೆ ನಡೆದಿತ್ತು. ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಿಂದ ತಡೆಯಾಜ್ಞೆ ಮಾಡಲಾಯಿತು. ಆದ್ದರಿಂದ ನಿಗಮದಿಂದ ಆಯ್ಕೆಯಾದ ಫಲಾನುಭವಿಗಳಗೆ ಸಾಲ ಮಂಜೂರಾತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಸಕ ಎಚ್.ಆರ್.ಗವಿಯಪ್ಪ ಅವರ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಿಗೆ ಮನವಿ ಪತ್ರ ರವಾನಿಸಿದರು. ಸಂಘಟನೆಯ ಮುಖಂಡರಾದ ವೈ.ಯಮುನೆಶ್, ರವಿ ಶಂಕರ್ ದೇವರಮನೆ ಹಾಗೂ ಶಿವಾ ಇತರರು ಪಾಲ್ಗೊಂಡಿದ್ದರು.

One attachment • Scanned by Gmail