ಹಿಂದುಳಿದ ವರ್ಗದ ಅಭ್ಯರ್ಥಿಗೆ ಲೋಕಸಭೆಯ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿ: ಮನಸೋರ್ ಖಾದ್ರಿ

ಬೀದರ್ : ಫೆ.4:ಜಿಲ್ಲೆಯ ಹಿಂದುಳಿದ ಸಮಾಜದ ಏಳಿಗೆಗಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಹಾಗೂ ಓಬಿಸಿ ಮೈನಾರಿಟಿ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಟಿಕೆಟ್ ನೀಡಿ ಎಂದು ಮನಸೋರ್ ಖಾದ್ರಿ ತಿಳಿಸಿದ್ದರು.
ನಗರದ ಪತ್ರಿಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು
ಬೀದರ್ ಜಿಲ್ಲೆಯ ಶೈಕ್ಷಣಿಕ ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ಭವಿಷ್ಯಕ್ಕಾಗಿ ಸುಮಾರು ವರ್ಷಗಳಿಂದ ಶ್ರಮಿಸುತ್ತಿರುವ ನ್ಯಾಯವಾದಿ ಹಾಗೂ ಮರಾಠ ಸಮಾಜದ ಮುಖಂಡರಾದ ನಾರಾಯಣ ಗಣೇಶ್ ವಕೀಲ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಬೇಕೆಂದು ಪಕ್ಷದ ವರಿಷ್ಠರಿಗೆ ವಿನಂತಿಸಲಾಯಿತು .
ಇಲ್ಲವಾದರೆ ಅಲ್ಪಸಂಖ್ಯಾತರ ಸಮುದಾಯದ ಯಾರಾದ್ರೂ ಒಳ್ಳೆಯ ಅಭ್ಯರ್ಥಿಯನ್ನು ಬೀದರ್ ಲೋಕಸೇ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರೆತರೆ ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಹಾಗೂ ಓಬಿಸಿ ಮೈನಾರಿಟಿ ಸಮುದಾಯದ ನೂರಕ್ಕೆ ನೂರು ಪ್ರತಿಶತ ಗೆಲ್ಲಿಸಿ ತರಲು ನಾವು ಹಗಲಿರಲು ಶ್ರಮಿಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸುರೇಶ್ ಟಾಕಳೆ , ಅಶೋಕ್ ಮಾಳಗೆ, ಸತೀಶ್ ಸೂರ್ಯವಂಶಿ, ವೈಜಿನಾಥ ತಾರವ್ ಉಪಸ್ಥಿತರಿದ್ದರು.