ಹಿಂದುಳಿದ ವರ್ಗದ ಅಭಿವೃದ್ಧಿಗೆ ಸ್ವಾಭಿಮಾನ ಫೌಂಡೇಶನ್ ಸ್ಥಾಪನೆ: ಕೊಂಡಪಲ್ಲಿ

ಹುಬ್ಬಳ್ಳಿ,ಏ17: ಹಿಂದುಳಿದ ವರ್ಗದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಸ್ವಾಭಿಮಾನ ಫೌಂಡೇಶನ್ (ರಿ) ಸ್ಥಾಪನೆ ಮಾಡಲಾಗಿದ್ದು, ಸರ್ಕಾರ ಮತ್ತು ಖಾಸಗಿ ಸಂಘ ಸಂಸ್ಥೆಗಳ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಹೇಳಿದರು.
ನಗರದಲ್ಲಿಂದು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿನಗರದ ಸಮಾನ ಮನಸ್ಕರು ಸೇರಿಕೊಂಡು ಸ್ವಾಭಿಮಾನ ಫೌಂಡೇಶನ್ ಸ್ಥಾಪನೆ ಮಾಡಲಾಗಿದೆ. ಈ ಸಂಘದ ಅಧ್ಯಕ್ಷರಾಗಿ ಮಂಜುನಾಥ ಕೊಂಡಪಲ್ಲಿ, ಉಪಾಧ್ಯಕ್ಷರಾಗಿ ಶರಣಪ್ಪ, ಗೌರವ ಅಧ್ಯಕ್ಷರಾಗಿ ಪರಶುರಾಮ ಮಲ್ಯಾಳ, ಸಹ ಗೌರವಾಧ್ಯಕ್ಷರಾಗಿ ಲಕ್ಷ್ಮಣ ಏಸುಫೆÇೀಗ್, ಕಾರ್ಯದರ್ಶಿಯಾಗಿ ಪುಲಕೇಶ ಮಲ್ಯಾಳ, ಸಹ ಕಾರ್ಯದರ್ಶಿಯಾಗಿ ಮಹೇಶ ಎಮ್.ಬಿ, ಖಜಾಂಚಿಯಾಗಿ ಸೌಮ್ಯ ಕೊಂಡಪಲ್ಲಿ ಸೇರಿದಂತೆ ಮುಂತಾದ ಸದಸ್ಯರು ಸಂಘದಲ್ಲಿದ್ದಾರೆ ಎಂದರು.
ಇನ್ನೂ ಸಂಘದ ಮೂಲಕ ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಹಿಂದೂಳಿದ ವರ್ಗಗಳ ಜನರಿಗೆ ಸಹಾಯ ಮಾಡುವ ಜತೆಗೆ ಅವರ ಅಭ್ಯುದಯಕ್ಕೆ ಶ್ರಮಿಸಲಾಗುವುದು. ಇದಲ್ಲದೇ ಯುವಜನ ಸಬಲೀಕರಣಕ್ಕೆ ಮಹಿಳೆಯರು ಮತ್ತು ಪುರುಷರಿಗೆ ವಿವಿಧ ರೀತಿಯ ತರಬೇತಿ ಕಾರ್ಯಗಾರ, ಉದ್ಯೋಗ ನೇಮಕಾತಿ ಕುರಿತು ಮಾಹಿತಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುಲಿಕೇಶ ಮಲ್ಯಾಳ, ಮಹೇಶ ಬಂಡಾರಿ ಸೇರಿದಂತೆ ಮುಂತಾದವರು ಇದ್ದರು.