ಹಿಂದುಳಿದ ವರ್ಗಗಳ ಒಕ್ಕೂಟದಿಂದ ನಾಳೆ ಅಭಿನಂದನಾ ಕಾರ್ಯಕ್ರಮ

ದೇವದುರ್ಗ,ಏ.೧೭-ತಾಲೂಕ ಹಿಂದುಳಿದ ವರ್ಗಗಳ ಒಕ್ಕೂಟದಿಂದ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರು, ಗ್ರಾಮ ಪಂಚಾಯತಿ, ಪುರಸಭೆ ಸದಸ್ಯರು ಮತ್ತು ನಾಮನಿದೇರ್ಶನ ಸದಸ್ಯರುಗಳಿಗೆ ಅಭಿನಂದನಾ ಸನ್ಮಾನ ಕಾರ್ಯಕ್ರಮ ರವಿವಾರ ದೇವದುರ್ಗದ ಡಾ.ಜಗಜೀವನ ರಾಮ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕ ಹಿಂದುಳಿದ ವರ್ಗಗಳ ಒಕ್ಕೂಟ ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ ಹೇಳಿದರು.
ಅವರು ಸ್ಥಳಿಯ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವದುರ್ಗ ತಾಲೂಕಿನ ಹಿಂದುಳಿದ ವರ್ಗಗಳ ವಿವಿಧ ಸಮುದಾಯಗಳಿಂದ ಗ್ರಾಮ ಪಂಚಾಯತಿ, ಪುರಸಭೆ, ಸರಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರುಗಳಿಗೆ ತಾಲೂಕ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಅಭಿನಂದನಾ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು.
ಈ ಕಾರ್ಯಕ್ರಮಕ್ಕೆ ದೇವದುರ್ಗ ತಾಲೂಕಿನ ಶಾಸಕರು, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸನ್ಮಾನ ಕೆ.ಶಿವನಗೌಡ ನಾಯಕ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಅಥಣಿ ತಾಲೂಕಿನ ಬಸವ ಕುಟೀರದ ಶ್ರೀ ಬಸವರಾಜೇಂದ್ರ ಶರಣರು, ಮಲದಕಲ್ ನಿಜಾನಂದ ಯೋಗಾಶ್ರಮದ ಶ್ರೀ ಗುರುಬಸವ ರಾಜಗುರುಗಳು, ಪೂಜ್ಯ ಶಿವಣ್ಣ ತಾತಾನವರು, ಶ್ರೀ ಮೌನೇಶ್ವರ ಮಹಾಸ್ವಾಮಿಗಳು, ನಾಗೋಲಿಯ ಚನ್ನಬಸವ ತಾತನವರು, ಮಾನಸಗಲ್ ಗಂಗಪಯ್ಯ ಪೂಜಾರಿಗಳು, ಸೇರಿದಂತೆ ಮುಖ್ಯ ಅಥಿತಿಗಳಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಶಾಂತಪ್ಪ ರಾಯಚೂರು, ಭಾಜಪ ತಾಲೂಕ ಅಧ್ಯಕ್ಷ ಕೆ.ಜಂಬಣ್ಣ ನಿಲ್ಲಗಲ್, ತಾಲೂಕ ಪಂಚಾಯತಿ ಸದಸ್ಯೆ ಮಾರೆಮ್ಮ ಬಸವಂತಪ್ಪ ಯಾದವ್, ಎಪಿಎಂಸಿ ಉಪಾಧ್ಯಕ್ಷ ಸಿದ್ದಣ್ಣ ಗಣೇಕಲ್, ಎಪಿಎಂಸಿ ನಿರ್ದೇಶಕಿ ಅನ್ನಪೂರ್ಣಮ್ಮ ಪರಮಾನಂದ, ಹಂಪಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ಬಸವರಾಜ ಕೊಪ್ಪರು, ತಾಲೂಕ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಕೋಲ್ಕಾರ್, ಸೇರಿದಂತೆ ತಾಲೂಕಿನ ಹಿಂದುಳಿದ ವರ್ಗಗಳ ವಿವಿಧ ಸಮಾಜಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ತಾಲೂಕ ಗೌರವಧ್ಯಕ್ಷ ಗಂಗಪ್ಪಯ್ಯ ಪೂಜಾರಿ, ಉಪಾಧ್ಯಕ್ಷರಾದ ಸಾಬಣ್ಣ ಗೂಗಲ್, ಕರಿಯಪ್ಪ ಕೊಡಗಂಟಿ, ಜಿಲ್ಲಾ ಸಮಿತಿ ಸದಸ್ಯ ಚಿತ್ರಶೇಖರ ವಿಶ್ವಕರ್ಮ, ಸವಿತಾ ಸಮಾಜ ಅಧ್ಯಕ್ಷ ಗೂಳಪ್ಪ ಹೇಮನೂರು, ಬಸವರಾಜ ಕೊಪ್ಪರು, ಅಮರೇಶ ಇಟಗಿ, ಭೀಮಾಶಂಕರ, ರಮೇಶ, ಶಂಕರ ಹೇಮನೂರು, ರಾಘವೇಂದ್ರ ಸೇರಿದಂತೆ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.