ಹಿಂದುಳಿದ ಜಿಲ್ಲೆಗಳಲ್ಲಿ ಲಸಿಕೆ ವೇಗ ಹೆಚ್ಚಿಸಿ

ನವದೆಹಲಿ, ನ.೩- ದೇಶದಲ್ಲಿ ಕೊರೊನಾ ಸೋಂಕಿನ ಲಸಿಕೆ ನೀಡಿಕೆಯಲ್ಲಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ಲಸಿಕಾ ವೇಗ ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
ನಿಗದಿತ ಅವಧಿಯೊಳಗೆ ಎಲ್ಲರಿಗೂ ಲಸಿಕೆ ನೀಡುವ ಗುರಿ ತಲುಪಬೇಕಾದರೆ ಕಡಿಮೆ ಸಾಧನೆ ಮಾಡಿರುವ ಜಿಲ್ಲೆಗಳು ಕೂಡ ವೇಗವಾಗಿ ಲಸಿಕೆ ನೀಡಿಕೆ ಗುರಿ ಸಾಧಿಸಬೇಕು ಎಂದು ಅವರು ಹೇಳಿದ್ದಾರೆ.
ದೇಶದ ೧೧ ರಾಜ್ಯಗಳ ೪೦ ಜಿಲ್ಲಾಡಳಿತಗಳು ಲಸಿಕೆ ನೀಡಿಕೆಯಲ್ಲಿ ಹಿಂದೆ ಬಿದ್ದಿದ್ದು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಂವಾದ ನಡೆಸಿದ ಪ್ರಧಾನಿ ಅವರು, ಲಸಿಕೆ ನೀಡುವ ಮೂಲಕ ಸೋಂಕು ಹರಡದಂತೆ ನೋಡಿಕೊಳ್ಳಬೇಕು ಏನು ಮಾಡುತ್ತೀವಿ ಮಾತು ಹೇಳಿದ್ದಾರೆ.
ಸಂವಾದದ ಸಂದರ್ಭದಲ್ಲಿ ಹಾಜರಿದ್ದ ಮೇಘಾಲಯ, ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ, ಯಾವ ಜಿಲ್ಲೆಗಳಲ್ಲಿ ಕಡಿಮೆ ಲಸಿಕೆ ನೀಡಲಾಗಿದೆ. ಅಂತಹ ಜಿಲ್ಲೆಗಳಲ್ಲಿ ಹೆಚ್ಚು ಮಾಡುವಂತೆ ಸೂಚನೆ ನೀಡಿದ್ದಾರೆ.
ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ಶೇಕಡ ಐವತ್ತಕ್ಕೂ ಕಡಿಮೆ ಹಾಗೂ ಎರಡನೇ ಡೋಸ್ ಲಸಿಕೆ ನೀಡಿಕೆಯಲ್ಲಿ ಹಿಂದುಳಿದಿರುವ ೪೦ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಿದರು.
ನಾಗಾಲ್ಯಾಂಡ್ ಕಿಪೈರಿ ಜಿಲ್ಲೆಯಲ್ಲಿ ಅಕ್ಟೋಬರ್ ೨೭ ರ ತನಕ ಕೇವಲ ಶೇಕಡ ೧೬.೧ರಷ್ಟು ಮಂದಿಗೆ ಮಾತ್ರ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಇದು ದೇಶದಲ್ಲಿ ಅತಿ ಕಡಿಮೆ ಪ್ರಮಾಣದ್ದಾಗಿದೆ.
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಶೇ.೪೯.೬, ಔರಂಗಾಬಾದ್ ಜಿಲ್ಲೆಯಲ್ಲಿ ಶೇ.೪೬.೫, ನಾಂದೇಡ್ ಜಿಲ್ಲೆಯಲ್ಲಿ ,ಶೇ.೪೮.೪, ಅಂಕೋಲಾ ಜಿಲ್ಲೆಯಲ್ಲಿ ಶೇ.೪೯.೩, ದಿಯೋಗರ್ ಜಿಲ್ಲೆಯಲ್ಲಿ ಶೇ.೪೪.೨, ಸಿಂಗ್ ಬೂಮ್ ಜಿಲ್ಲೆಯಲ್ಲಿ ಶೇ.೪೭.೮, ಮತ್ತು ದೆಹಲಿಯ ಉತ್ತರ, ಪಶ್ಚಿಮ ಜಿಲ್ಲೆಗಳಲ್ಲಿ ಶೇ.೪೮.೨ ರಷ್ಟು ಮಾತ್ರ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಶೇ.೭೮ ರಷ್ಟು ಮೊದಲ ಡೋಸ್
ದೇಶದಲ್ಲಿ ಇದುವರೆಗೂ ಶೇಕಡ ೭೮ರಷ್ಟು ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ ಸುಖ್ ಮಾಂಡವೀಯ ತಿಳಿಸಿದ್ದಾರೆ.
ಜೊತೆಗೆ ಶೇಕಡಾ ೩೮ ರಷ್ಟು ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಈ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚು ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.