ಹಿಂದುಳಿದ ಕುಟುಂಬದವರಿಗೆ ಆಹಾರ ಕಿಟ್ ವಿತರಣೆ

ಹೊಸನಗರ.ಜೂ.೧೦; ಕೊವೀಡ್-19 ಹಿನ್ನಲೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಿಂದುಳಿದ ಕುಟುಂಬಗಳಿಗೆ ಸಹಾಯ ಹಸ್ತ ನೀಡುವ ಕರ‍್ಯ ಸಂಘ-ಸಂಸ್ಥೆಗಳಿಂದ ಆಗಬೇಕಿದೆ ಎಂದು ಶಿವಮೊಗ್ಗ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ದಿ ಟ್ರಸ್ಟ್‌ ನಿರ್ದೇಶಕ ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದಲ್ಲಿ  ರೋಟರಿ ಕ್ಲಬ್, ಯೂತ್ ಹಾಸ್ಟಲ್ ಇಂಟರ್ ನ್ಯಾಷಿನಲ್ ಅಸೋಸಿಯೇಷನ್ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ದಿ ಟ್ರಸ್ಟ್, ಸಕ್ಷಮ ಟ್ರಸ್ಟ್, ಅಭಿರುಚಿ ಸಂಸ್ಥೆ ಹಾಗೂ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ ಸಹಯೋಗದಲ್ಲಿ ಬಡತನ ರೇಖೆಗಿಂತ ಕೆಳಗಿನ ಕುಟುಂಬ ಹಾಗೂ ವಿಕಲಚೇತನರಿಗೆ ಮೆಡಿಕಲ್ ಮತ್ತು ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.ಮಹಾಮಾರಿ ಕೊರೋನ ರೋಗ ಸಾರ್ವಜನಿಕರ ಬದುಕನ್ನು ಮೂರಬಟ್ಟೆ ಆಗಿಸಿದೆ. ಶ್ರಮಿಕವರ್ಗದ ಕೈಗಳಿಗೆ ಕೆಲಸವಿಲ್ಲದೆ ಆರ್ಥಿಕ ಸ್ಥಿತಿ ಹೈರಾಣಾಗಿಸಿದೆ. ಬದುಕು ಸಾಗಿಸುವುದೇ ಕಷ್ಟಕರವಾಗಿದ್ದು, ಜಿಲ್ಲೆಯಲ್ಲಿ ಅಂತಹ ಹತ್ತು ಸಾವಿರ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸುವ ಗುರಿಯನ್ನು ಸಂಸ್ಥೆ ಹೊಂದಿದ್ದು, ಈಗಾಗಲೇ 4 ಸಾವಿಕ ಕುಟುಂಬಗಳಿಗೆ ಕಿಟ್ ಹಂಚಿಕೆ ಮಾಡಲಾಗಿದೆ. ಜನತೆ ಸ್ಯಾನಿಟೈಜರ್, ಮಾಸ್ಕ್ ಹಾಗೂ ಪರಸ್ಪರ ಅಂತರ ಕಾಪಾಡಿಕೊಳ್ಳುವ ಮೂಲಕ ರೋಗ ತಡೆಗಟ್ಟಲು ಸಹಕರಿಬೇಕೆಂದು ಕೋರಿದರು.ಇದೇ ವೇಳೆ ಇಲ್ಲಿನ ಕೊರೋನ ಕೇರ್ ಸೆಂಟರ್‌ನಲ್ಲಿ ದಾಖಲಾಗಿರುವ ಸುಮಾರು 80 ಶಂಕಿತರಿಗೆ ಬ್ರಷ್, ಟೂತ್ ಪೇಸ್ಟ್ ಹಂಚಿಕೆ ಮಾಡಿಲಾಯಿತು. ಯೂತ್ ಹಾಸ್ಟೆಲ್‌ನ ರಾಷ್ಟಿçÃಯ ಕಾರ್ಯದರ್ಶಿ ದಿಲೀಪ್ ನಾಡಿಗ್, ಸುಕ್ಷಮ ಟ್ರಸ್ಟ್ ಅಧ್ಯಕ್ಷ ಕುಮಾರ ಶಾಸ್ತಿç, ಗಂಗಾಧರ, ರೋಟರಿ ಸಂಸ್ಥೆಯ ಉಪಸಭಾಪತಿ ಡಿ.ಎಂ. ಸದಾಶಿವ ಶ್ರೇಷ್ಠಿ, ಕಾರ್ಯದರ್ಶಿ ಅಶೋಕ್ ಗುಳೇದ್, ನಿರ್ದೇಶಕರಾದ ಡಾ. ಮಾರ್ಷಲ್ ಶರಾಂ, ಕೆ.ಜಿ. ನಾಗೇಶ್, ನೋರಾಮೆಟೆಲ್ಧಾ ಸಿಕ್ವೇರಾ, ಪತ್ರಕರ್ತರಾದ ಶ್ರೀಕಂಠ ಹೆಚ್.ಆರ್, ಮನು ಸುರೇಶ್ ಇದ್ದರು.