ಹಿಂದುಳಿದ ಅಭಿವೃದ್ದಿ ನಮ್ಮ ಮೂಲ ಉದ್ದೇಶ-ಪ್ರಕಾಶ್

ಕನಕಪುರ, ಜ. ೧೨- ಸಮಾಜದಲ್ಲಿ ಹಿಂದುಳಿದಿರುವ ಕಟ್ಟಕಡೆಯ ವ್ಯಕ್ತಿಯನ್ನು ಮೇಲೆತ್ತುವ ಉದ್ದೇಶದಿಂದ ರಾಮನಗರ ಜಿಲ್ಲಾ ಕುಸ್ತಿ ಸಂಘದ ಮೂಲ ದ್ಯೇಯವಾಗಿದೆ ಎಂದು ಅಧ್ಯಕ್ಷರಾದ ಪ್ರಕಾಶ್ ಹೇಳಿದರು.
ಕನಕಪುರ ನಗರದ ಐಪಿಪಿ ಆಸ್ಪತ್ರೆಯಲ್ಲಿ ಹಣ್ಣು, ಬ್ರೇಡ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಹಂಚುಮೂಲಕ ಮಾತನಾಡಿ ನಮ್ಮ ಸಂಘವು ಕಳೆದ ೮ ತಿಂಗಳ ಹಿಂದೆ ನೊಂದಾವಣಿಯಾಗಿದ್ದು ಕರೋನಾ ಬಂದ ಹಿನ್ನೆಲೆಯಲ್ಲಿ ಯಾವುದೇ ಸಾಮಾಜಿ ಚಟುವಟಿಕೆಗಳನ್ನು ನಮ್ಮ ಸಂಘದವತಿಯಿಂದ ಮಾಡುಲು ಸಾಧ್ಯವಾಗಿರಲಿಲ್ಲ ಈ ದಿನ ಪ್ರಥಮವಾಗಿ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳಿಗೆ ಹಾಗು ಆಸ್ಪತ್ರೆಯಲ್ಲಿ ದಾಖಲಾಗಿರುವ ಹೊರರೊಗಿಗಳಿಗೆ ಹಾಲು ಹಣ್ಣು, ಬ್ರೇಡ್ ನೀಡುವ ಪ್ರಥಮ ಸಾಮಾಜಿಕ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ನಮ್ಮ ಸಂಘದವತಿಯಿಂದ ಸಮಾಜದಲ್ಲಿ ಹಿಂದಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಬ್ಯಾಸಕ್ಕೆ ಬೇಕಾದ ಸಲಕರಣೆಗಳನ್ನು ನೀಡುವ ಕಾರ್‍ಯಕ್ರಮವಿದೆ ಹಾಗೆಯೇ ಇದೇ ತಿಂಗಳು ೩೧ನೇ ತಾರೀಖು ಜಿಲ್ಲಾ ಮಟ್ಟದ ಕುಸ್ತಿ ಪಂಧ್ಯಾವಳಿಯನ್ನು ಸಂಘದ ಗೌರವಾಧ್ಯಕ್ಷರಾದ ಹೋಟೆಲ್ ನಾಗರಾಜು ನೇತೃತ್ವದಲ್ಲಿ ಸಹ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಸಂಘದ ಪ್ರಧಾನ ಕಾರ್‍ಯದರ್ಶಿ ವೇಣು ಮಾತನಾಡಿ ಕುಸ್ತಿಪಂದ್ಯಾವಳಿಯ ಮೂಲಕ ರಾಜ್ಯ ಮಟ್ಟ ಹಾಗೂ ಅಂತರಾಜ್ಯ ಮಟ್ಟದಲ್ಲಿ ಪಂದ್ಯಾವಳಿಯನ್ನು ಆಯೋಜಿಸಿ ಜಿಲ್ಲೆಗೆ ಚಿನ್ನದ ಪದಕವನ್ನು ತರಬೇಕೆಂಬ ಬಯಕೆಯನ್ನು ಇಟ್ಟುಕೊಂಡಿದ್ದೇವೆಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸತೀಶ್‌ರವರು ಮಾತನಾಡಿ ಕುಸ್ತಿಕಲೆ ನಮ್ಮ ಸಾಂಸ್ಕೃತಿಕ ಕಲೆಯಾಗಿದ್ದು ಇದು ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿದೆ ಇದಕ್ಕೆ ಮುಂದಿನ ದಿನಗಳಲ್ಲಿ ಹೊಸ ಚೈತನ್ಯವನ್ನು ತುಂಬುವ ಮೂಲಕ ಹೊಸ ಹೊಸ ಪೀಳಿಗೆಯನ್ನು ಸಂಘಕ್ಕೆ ಜೋಡಿಸಿಕೊಳ್ಳಲಾಗುವುದೆಂದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ವರ್ಷ ವಡೆಯರು ಕೂಡ ಆಗಮಿಸಿ ಗರ್ಭಿಣಿ ಮಹಿಳೆಯರು ಹಾಗೂ ಬಾಣಂತಿಯರಿಗೆ ಹಾಲು ಹಣ್ಣು, ವಿತರಿಸಿ ಜಿಲ್ಲಾ ಮಟ್ಟದ ಕುಸ್ತಿ ಪಟುಗಳ ಸಂಘವು ಹೆಚ್ಚು ಸಮಾಜಮುಖಿ ಕೆಲಸಗಳನ್ನು ಮಾಡುವುದಲ್ಲದೆ ತಾವು ಬೆಳೆದ ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡ್ಯಲಿ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.