ಹಿಂದಿ ಹೇರಿಕೆ – ಖಂಡನೆ

ರಾಯಚೂರು.ಏ.೨೦- ರಾಜ್ಯದ ಜನರ ಮೇಲೆ ಕೇಂದ್ರ ಸರ್ಕಾರ ಬಲವಂತಾಗಿ ಹಿಂದಿ ಹೇರುವ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಭ್ಯರ್ಥಿಯಾದ ಭೀಮನಗೌಡ ಇಟಗಿ ಅವರು ಹೇಳಿದರು.
ಅವರಿಂದು ತಮ್ಮ ಹೇಳಿಕೆ ನೀಡುತ್ತಾ, ಕನ್ನಡ ಭಾಷೆ, ಶಾಸ್ತ್ರೀಯ ಭಾಷೆಯಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಮುಖ್ಯ. ಆದರೆ, ಕೇಂದ್ರ ಸರ್ಕಾರ ಹಿಂದಿ ಹೇರುವ ಮೂಲಕ ಕನ್ನಡಿಗರ ಭಾವನೆಗಳ ಮೇಲೆ ಆಕ್ರಮಣ ಮಾಡುತ್ತಿದೆ. ಈ ರೀತಿ ಮಾಡುವುದು ಭಾಷಾವಾರು ಪ್ರಾಂತ್ಯಗಳ ಉದ್ದೇಶದ ಮಹತ್ವವನ್ನೇ ಕಳೆದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಧೋರಣೆಯನ್ನು ಬದಲಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕನ್ನಡದ ಮೇಲೆ ಹಿಂದಿ ಹೇರುವ ಪ್ರಯತ್ನಗಳನ್ನು ಕನ್ನಡಿಗರು ಸಹಿಸುವುದಿಲ್ಲ. ಕೇಂದ್ರ ಸರ್ಕಾರ ಬಲವಂತ ಹಿಂದಿ ಹೇರುವುದನ್ನು ಕೈ ಬಿಡಬೇಕೆಂದು ಆಗ್ರಹಿಸಿದರು.