ಹಿಂದಿ ಶಿಕ್ಷಕರ ನಿಧನ

ಚಿತ್ರದುರ್ಗ.ಮೇ.೨೮ : ನಗರದ ಎಸ್.ಜೆ.ಎಂ. ಹಿಂದಿ ಬಿ.ಇಡಿ. ಕಾಲೇಜಿನ ಪ್ರಾಚರ‍್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕೊಟ್ಟೂರು ಮೂಲದ ಡಿ. ಕೊಟ್ರೇಶಪ್ಪ ಲಿಂಗೈಕ್ಯರಾದರು. ಭರಮಸಾಗರದಲ್ಲಿ ನೆಲೆಸಿದ್ದ ಅವರನ್ನು ಡಾ. ಶಿವಮೂರ್ತಿ ಮುರುಘಾ ಶರಣರು ಹಾಗೂ ಸಮಾಜದ ವತಿಯಿಂದ ಗೌರವಿಸಲಾಗಿತ್ತು. ಮೃತರ ಕುಟುಂಬದವರಿಗೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬಸವಾದಿ ಪ್ರಮಥರು ನೀಡಲಿ ಎಂದು ಶ್ರೀಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಭರಮಸಾಗರದಲ್ಲಿ ಬೆಳಗ್ಗೆ 11.30ಕ್ಕೆ ಅಂತ್ಯಸಂಸ್ಕಾರ ನಡೆಯಲಿದೆ.