ಹಿಂದಿ ಭಾಷಾ ಹೇರಿಕೆಗೆ ಬಾಲಾಜಿ ಖಂಡನೆ

ಕಲಬುರಗಿ:ಜೂ.15: ಸಮಗ್ರ ಕರ್ನಾಟಕ ಹಾಗೂ ಕನ್ನಡಿಗರ ಸಂರಕ್ಷಣೆಗಾಗಿ ಸರಕಾರ ದಿಟ್ಟ ಕ್ರಮಕೈಗೊಳ್ಳಬೇಕು ಎಂದು ಕರವೇ(ಪ್ರವೀಣ್ ಶೆಟ್ಟಿ) ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಾಜಿ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು,ಕನ್ನಡ ಭಾಷಿಕರ ಸಾರ್ವಭೌಮತೆಯನ್ನು ರಕ್ಷಿಸಿ ಕರ್ನಾಟಕವನ್ನು ಪ್ರಗತಿ ಪಥದತ್ತ ಮುನ್ನಡೆಸುವ ನಿಟ್ಟಿನಲ್ಲಿ ನೂತನ ಸರಕಾರ ಶ್ರಮಿಸಬೇಕು ಎಂದರು.ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದರು.ದ್ವಿಭಾಷಾ ನೀತಿ ಜಾರಿಗೆ ತರಬೇಕು. ಪ್ರಥಮ ಕನ್ನಡ ಭಾಷೆ ಕಲಿಯಲೇ ಬೇಕು.ಎರಡನೇ ಭಾಷೆಯಾಗಿ ಇಂಗ್ಲಿಷ್ ಇರಲಿ.ಹಿಂದಿ ಭಾಷೆ ಇರುವ ರಾಜ್ಯಗಳಲ್ಲಿ ಪ್ರಥಮ ಹಿಂದಿ ಭಾಷೆ,ಎರಡನೇ ಭಾಷೆ ಇದೆ. ನಮಗೆ ಏಕೆ ತ್ರಿಭಾಷಾ ಸೂತ್ರ ? ಎಂದು ಅವರು ಪ್ರಶ್ನಿಸಿದರು.
ಹೊರ ರಾಜ್ಯಗಳಿಂದ ವ್ಯಾಪಾರ, ಉದ್ಯೋಗ, ಕೂಲಿ ಕೆಲಸ ಹೀಗೆ ದುಡಿಮೆಗೆಂದು ಬರುವ ವರ್ತಕರು ಕಾರ್ಮಿಕರು ಮತ್ತು ಖಾಸಗಿ ನೌಕರರು ಕನ್ನಡ ಭಾಷೆ ತಿರಸ್ಕರಿಸಿ ಅವರವರ ಭಾಷೆ ಮಾತನಾಡಿ ಕನ್ನಡ, ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಕೂಡಲೇ ಇದನ್ನು ತಡೆಯಬೇಕು. ಕನ್ನಡ ಭಾಷೆ ಕಲಿತವರಿಗೆ ಮಾತ್ರ ಮೂಲ ಸೌಕರ್ಯ ಒದಗಿಸುವ ಕಾರ್ಯ ನಡೆಯಬೇಕು ಎಂದರು.ರಾಜ್ಯದ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡಬೇಕು.ರೈತರ ಸಾಲ ಮನ್ನಾ ಮಾಡಬೇಕು.ಕನ್ನಡ ಕಲಾವಿದರು,ಕ್ರೀಡಾಪಟುಗಳು ಆರ್ಥಿಕ ಪೆÇ್ರೀತ್ಸಾಹ ಅನುದಾನ ನೀಡಬೇಕು.ಪಠ್ಯಪುಸ್ತಕಗಳಲ್ಲಿ ಕನ್ನಡ ನಾಡಿನ ಚಕ್ರವರ್ತಿಗಳು,ಮಹಾಕವಿಗಳು,ನಾಡು-ನುಡಿ, ಕನ್ನಡ ಹಿರಿಮೆಗಳನ್ನು ಪರಿಚಯಿಸಬೇಕು ಎಂದು ಅವರು ಆಗ್ರಹಿಸಿದರು.