ಹಿಂದಿ ದಿವಸ್‌ಗೆ ನಟ ವಿಜಯ್ ವಿರೋಧ

ಬೆಂಗಳೂರು,ಸೆ.೧೬: ಹಿಂದಿ ದಿವಸ್ ಆಚರಣೆಗೆ ಚಲನಚಿತ್ರ ನಟರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವೇ ಹೊರೆತು ಹಿಂದಿಯಲ್ಲಿ ಎಂದು ಕೂಗು ಎದಿರುವ ನಡುವೆ ಚಿತ್ರ ನಟ ದುನಿಯಾ ವಿಜಯ್ ರಾಜ್ಯದಲ್ಲಿ ಹಿಂದಿ ದಿವಸ್ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಹಿಂದಿ ಆಡಳಿತ ಭಾಷೆಯಲ್ಲ. ಕನ್ನಡಿಗರು ಕನ್ನಡತನದ ಅಸ್ಮಿತೆಗಾಗಿ ಹೋರಾಡೋಣ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ. ಹಿಂದಿ ದಿವಸ್ ಆಚರಣೆ ಸಂಬಂಧಿಸಿದಂತೆ ಆಕ್ರೋಶವ್ಯಕ್ತಪಡಿಸಿಡಿಸಿರುವ ಅವರು ರಾಜ್ಯದಲ್ಲಿ ಹಿಂದಿ ಆಡಳಿತ ಭಾಷೆಯಲ್ಲ. ಹುಟ್ಟಿದಾಗಿನಿಂದ ಗೊತ್ತಿರುವ ಭಾಷೆ ಕನ್ನಡ. ಹಿಂದಿ ಕಲಿಯುವುದಿಲ್ಲ ಎಂದು ಹೇಳುವುದಿಲ್ಲ. ಆದರೆ, ಅವಶ್ಯಕತೆಗೆ ಎಷ್ಟು ಅಷ್ಟು ಸಾಕು. ನಾವು ಹಿಂದಿ ಭಾಷಿಕರಲ್ಲ. ನಮ್ಮ ಮೇಲೆ ಹಿಂದಿ ಹೇರಲು ಬಂದರೆ ಸುಮ್ಮನೆ ಬಿಡಲ್ಲ. ದಿನವು ಕನ್ನಡ ದಿನ ಆಚರಿಸೋಣ ಎಂದು ತಿಳಿಸಿದರು.