ಹಿಂದಿ ದಿನಾಚರಣೆ


ಹುಬ್ಬಳ್ಳಿ,ಸೆ.14: ನಗರದ ಕುಸುಗಲ್ ರೋಡ್‍ನಲ್ಲಿರುವ ಡಾ.ಆರ್.ಬಿ.ಪಾಟೀಲ್ ಮಹೇಶ್ ಪಿಯು ಕಾಲೇಜ್‍ನಲ್ಲಿ ಹಿಂದಿ ಭಾಷೆಯ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿಂದಿ ಭಾಷೆಯ ಪ್ರಾಧ್ಯಾಪಕಿ ಡಾ. ನಿಶಾ ವರ್ಮಾರವರು ಭಾಷೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ರವೀರಾಜ್ ಎಂ.ಎಸ್. ಅವರು ಹಿಂದಿ ದಿನಾಚರಣೆ ಅಂಗವಾಗಿ
ವಿದ್ಯಾರ್ಥಿಗಳಿಗೆ ಹಿಂದಿ ಭಾಷೆ ಮಹತ್ವವದ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ, ಅನಿಲ್ ಕದಂ, ವೀರೇಶ್ ಬಿಜ್ಜರಗಿ, ಓಲವೀಯಾ ಫರ್ನಾಂಡಿಸ್, ಕಾಲೇಜಿನ ಮಾರ್ಕೆಟಿಂಗ್ ವಿಭಾಗದ ರಾಜಣ್ಣಾ ಗುಡಿಮನಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.