ಹಿಂದಿ ದಿನಾಚರಣೆ: ಸಭೆ


ಲಕ್ಷ್ಮೇಶ್ವರ,ಜ.12: ಪಟ್ಟಣದ ಉಮಾ ವಿದ್ಯಾಲಯದಲ್ಲಿ ಹಿಂದಿ ದಿನಾಚರಣೆ ಅಂಗವಾಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಜರುಗಿತು.
ಹಿಂದಿ ದಿನಾಚರಣೆಯ ನಂತರ ಹಿಂದಿ ಕಲಿಸಿದ ನಿವೃತ್ತ ಶಿಕ್ಷಕ ಎಸ್ ಎಸ್ ನಾಗಲೋಟಿಯವರನ್ನು ಹಳೆಯ ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಂ ಮುಂದಿನ ಮನಿ ಅವರು ಮಾತನಾಡಿ ಹಳೆಯ ವಿದ್ಯಾರ್ಥಿಗಳು ಹಿಂದಿ ಕಲಿಸಿದ ಶಿಕ್ಷಕರನ್ನು ಮತ್ತು ತಮ್ಮ ಭವಿಷ್ಯವನ್ನು ರೂಪಿಸಿದ ಶಿಕ್ಷಕರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ ಜೀವನದಲ್ಲಿ ಸನ್ಮಾರ್ಗ ತೋರುವ ಗುರುಗಳ ಬಗ್ಗೆ ಅಭಿಮಾನ ಮತ್ತು ಗೌರವನಿಟ್ಟು ಗುರು ಶಿಷ್ಯರ ಸಂಬಂಧಕ್ಕೆ ಬೆಸುಗೆಯಾಗಿ ಹಳೆಯ ವಿದ್ಯಾರ್ಥಿಗಳಿಗೆ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಬಿ ಎಸ್ ಹರ್ಲಾಪುರ, ಎಂಎಸ್ ಹಿರೇಮಠ ,ಪಿವಿ ಹಲಗುಂಡಿ ಸೇರಿದಂತೆ ಅನೇಕ ಶಿಕ್ಷಕರಿದರು.