ಹಿಂದಿನ ಸರ್ಕಾರಗಳಂತೆ ಈ ಬಾರಿಯೂ ಕೋಲಾರ ಜಿಲ್ಲೆ ನಿರ್ಲಕ್ಷ್ಯ

ಕೋಲಾರ,ಜು,೯- ಹಿಂದಿನ ಸರ್ಕಾರಗಳಂತೆ ಈ ಸರ್ಕಾರವೂ ಸಹ ಕೋಲಾರ ಜಿಲ್ಲೆಗೆ ಸಚಿವ ಸ್ಥಾನದಿಂದ ಹಿಡಿದು ಅಭಿವೃದ್ಧಿ ವಿಚಾರವರೆಗೂ ಕೋಲಾರ ಜಿಲ್ಲೆಯನ್ನು ನಿರ್ಲಕ್ಷ ಮಾಡುತ್ತಿವೆ ಸರ್ಕಾರಗಳು , ೪ ಕಾಂಗ್ರೆಸ್ ಶಾಸಕರಿದ್ದರೂ ಸಹ ಯಾವುದೇ ರೀತಿಯ ಜಿಲ್ಲೆಗೆ ಪ್ರಯೋಜನ ಆಗಿಲ್ಲ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ಶೂನ್ಯ ಬಜೆಟ್ ನೀಡುವ ಮೂಲಕ ತಾರತಮ್ಯ ಮಾಡಿದೆ, ಜಿಲ್ಲೆಯ ಜನರ ನಿರೀಕ್ಷೆಗಳು ಸಾಕಾಷ್ಟು ಇದ್ದವು ಆದರೆ ಎಲ್ಲವನ್ನೂ ಹುಸಿ ಮಾಡಿದೆ.
ಕೆ.ಸಿ.ವ್ಯಾಲಿ ೩ನೇ ಹಂತದ ಶುದ್ದೀಕರಣ, ಸರ್ಕಾರಿ ಮೆಡಿಕಲ್ ಕಾಲೇಜ್, ಕೃಷಿ ಆದಾರಿತ ಕೈಗಾರಿಗಳಿಗೆ ಆದ್ಯತೆ, ಮಾವು ಮತ್ತು ಟಮೋಟೊ ಸಂಸ್ಕರಣ ಘಟಕಗಳು, ಎ.ಪಿ.ಎಂ.ಸಿ ಗೆ ೧೦೦ ಎಕರೆ ಜಮೀನು ಮಂಜೂರು ಮತ್ತು ಹೈಟೆಕ್ ಮಾರುಕಟ್ಟೆಯಾಗಿ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ ಗಾಗಿ ಅನುದಾನ, ಹೊರ ವರ್ತುಲ ರಸ್ತೆ, ಕಾಡಾನೆ ದಾಳಿಗೆ ಶಾಶ್ವತ ಪರಿಹಾರದ ಪರಿಹಾರ, ಕೆರೆಗಳ ಸಂರಕ್ಷಣೆಗೆ ಆದ್ಯತೆ, ನಕಲಿ ಬಿತ್ತನೆ ಬೀಜ, ಗೊಬ್ಬರಗಳ ನಿಯಂತ್ರಣ ಕಾಯ್ದೆ, ಪ್ರವಾಸಿ ತಾಣಗಳ ಅಭಿವೃದ್ಧಿ, ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ, ಇವುಗಳೆಲ್ಲವುಗಳಿಗೂ ನಮ್ಮ ನೀರೀಕ್ಷೆಗಳಿದ್ದವೂ ಆದರೆ ಯಾವುದು ಸಹ ಈಡೇರಿಸಿಲ್ಲ, ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ ಈ ಸರ್ಕಾರದಲ್ಲಿಯೂ ಸಹ ಮುಂದುವರೆದಿದೆ.
–ನಳಿನಿಗೌಡ.ಎ, ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ, ಕೋಲಾರ.