ಹಿಂಗು-ಇಂಗಿನ ಉಪಯೋಗಗಳು

ಪ್ರತಿನಿತ್ಯ ಆಹಾರದಲ್ಲಿ ನಾವು ಕೆಲವು ಪದಾರ್ಥಗಳನ್ನು ಕಡ್ಡಾಯವಾಗಿ ಬಳಸುತ್ತೇವೆ. ಕೆಲವೊಮ್ಮೆ ರುಚಿಗಾಗಿ, ಕೆಲವೊಮ್ಮೆ ಪರಿಮಳಕ್ಕಾಗಿ, ಕೆಲವೊಮ್ಮೆ ಬಣ್ಣಕ್ಕಾಗಿ ಬಳಸುತ್ತೇವೆ. ಆದರೆ ಅದರಲ್ಲಿರುವ ಔಷಧೀಯ ಗುಣಗಳನ್ನು ತಿಳಿದು ಬಳಸಿದರೆ ಅದರ ಮಹತ್ವ ಹೆಚ್ಚಾಗುತ್ತದೆ.
ಇದು ಕಹಿ ರಸವುಳ್ಳದ್ದು, ಉಷ್ಣಗುಣವುಳ್ಳದ್ದು, ತೀಕ್ಷ್ಣ ಗುಣವುಳ್ಳದ್ದು, ಮಾರುಕಟ್ಟೆಯಲ್ಲಿ ಸಿಗುವ ಇಂಗನ್ನು ಸರಿಯಾಗಿ ಪರೀಕ್ಷಿಸಿ ತೆಗೆದುಕೊಳ್ಳಿ. ಒಂದು ಬಟ್ಟಲು ನೀರಿಗೆ ಸ್ವಲ್ಪ ಇಂಗನ್ನು ಹಾಕಿ ಅದು ಕರಗಿದಂತೆಲ್ಲಾ ನೀರು ಬೆಳ್ಳಗಾಗಲು ಪ್ರಾರಂಭವಾಗುತ್ತದೆ. ಪೂರ್ತಿ ಕರಗಿದ ಮೇಲೆ ನೀರು ಪೂರ್ಣವಾಗಿ ಬೆಳ್ಳಗಾಗುತ್ತದೆ. ಹಾಗೂ ನೀರಿನ ತಳಭಾಗದಲ್ಲಿ ಸ್ವಲ್ಪವೂ ಕಲ್ಕ ಉಳಿಯುವುದಿಲ್ಲ. ಈ ರೀತಿ ಇದ್ದರೆ ಇದು ಶುದ್ಧ ಇಂಗು ಅಂತ ತಿಳಿಯಬಹುದು.
ಸಾಧಾರಣವಾಗಿ ಸೊಪ್ಪುಗಳು, ತರಕಾರಿಗಳು ಬೇಯುವಾಗ ವಾಯು ಬಿಡುಗಡೆ ಯಾಗುತ್ತದೆ. ಅದೇ ರೀತಿ ಶರೀರದಲ್ಲಿ ಆಹಾರ ಪಚನವಾಗುವ ಹಂತದಲ್ಲಿ ವಾಯು ಬಿಡುಗಡೆಯಾಗುತ್ತದೆ.
೧. ಎದೆಹಾಲು ಉತ್ಪತ್ತಿಗೆ: ಬಾಣಂತಿಯರಿಗೆ ಲವಂಗ ಹಾಗೂ ಇಂಗು ಸೇರಿಸಿ ಕಷಾಯದ ರೂಪದಲ್ಲಿ ಕೊಟ್ಟರೆ ಎದೆಹಾಲು ಹೆಚ್ಚಾಗಿ ಉತ್ಪತ್ತಿ ಆಗುತ್ತದೆ.
೨. ಉಬ್ಬಸ, ನಾಯಿ ಕೆಮ್ಮು ನಿವಾರಣೆಗೆ: ವೀಳ್ಯದೆಲೆ, ಬಿಳಿ ಈರುಳ್ಳಿ, ಕಡಲೆಕಾಳು ಗಾತ್ರದ ಇಂಗು ಇಷ್ಟನ್ನು ಅರೆದು ಅದರ ರಸಕ್ಕೆ ಜೇನುತುಪ್ಪ ಸೇರಿಸಿ ಪ್ರತಿನಿತ್ಯ ೨ ಬಾರಿ ಸೇವಿಸುವುದರಿಂದ ಉಬ್ಬಸ, ನಾಯಿಕೆಮ್ಮು ನಿವಾರಣೆಯಾಗುತ್ತದೆ.
೩. ಕೀಲುನೋವು: ಕೊಬ್ಬರಿ ಎಣ್ಣೆಯಲ್ಲಿ ಇಂಗಿನ ಪುಡಿಯನ್ನು ಹಾಕಿ ಬಿಸಿ ಮಾಡಿ ಅದನ್ನು ಕೀಲು ನೋವಿಗೆ ಹಚ್ಚಿ ಮಾಲೀಷು ಮಾಡುವುದರಿಂದ ನೋವು ಉಪಶಮನವಾಗುತ್ತದೆ.
೪. ಚೇಳು ಕಚ್ಚಿದ್ದಕ್ಕೆ: ಎಕ್ಕದ ಹಾಲಿನಲ್ಲಿ ಇಂಗನ್ನು ತೇಯ್ದು ಚೇಳು ಕಚ್ಚಿದ ಜಾಗಕ್ಕೆ ಹಚ್ಚುವುದರಿಂದ ಅನುಕೂಲ.
೫. ಮೊಡವೆ: ಇಂಗನ್ನು ನೀರಿನಲ್ಲಿ ತೇಯ್ದು ಮೊಡವೆಗಳಿರುವ ಜಾಗಕ್ಕೆ ಮಾತ್ರ ಹಚ್ಚುವುದರಿಂದ ಮೊಡವೆ ಅಲ್ಲಿಯೇ ಇಂಗಿ ಹೋಗುತ್ತದೆ.
೬. ಹೊಟ್ಟೆ ನೋವಿಗೆ: ಬಾಳೆಹಣ್ಣಿನಲ್ಲಿ ಇಂಗನ್ನು ಇಟ್ಟು ನುಂಗಿದರೆ ಹೊಟ್ಟೆನೋವು ಕಡಿಮೆ ಆಗುತ್ತದೆ.
೭. ಮಲಬದ್ಧತೆ: ನೀರಿನಲ್ಲಿ ಇಂಗನ್ನು ಕರಗಿಸಿ ಸೇವನೆ ಮಾಡುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
೮. ತಲೆನೋವಿಗೆ: ನೀರಿನಲ್ಲಿ ಇಂಗನ್ನು ಕರಗಿಸಿ ಕುಡಿಯುವುದರಿಂದ ಸ್ವಲ್ಪ ಸಮಯದಲ್ಲಿ ತಲೆನೋವು ನಿವಾರಣೆಯಾಗುತ್ತದೆ.
೯. ರಕ್ತದ ಒತ್ತಡ: ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಅಧಿಕ ರಕ್ತದ ಒತ್ತಡವನ್ನು ತಗ್ಗಿಸುತ್ತದೆ.
೧೦. ಹೊಟ್ಟೆ ಉಬ್ಬರಕ್ಕೆ: ತಿಂದ ಆಹಾರ ಚೆನ್ನಾಗಿ ಜೀರ್ಣಿಸದೆ ವಾಯು ಶೇಖರಣೆಯಾಗಿ ಹೊಟ್ಟೆ ಉಬ್ಬರಿಸಿದರೆ, ಇಂಗನ್ನು ಒಂದು ಲೋಟ ಮಜ್ಜಿಗೆಗೆ ಹಾಕಿ ಕುಡಿದರೆ ಹೊಟ್ಟೆ ಉಬ್ಬರ ಕಡಿಮೆ ಆಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧