ಹಿಂಗಾರು ಬೆಳೆ ಕ್ಷೇತ್ರ ಸಮೀಕ್ಷೆಯ ಮಾಹಿತಿ ಪಡೆದ ಸಂಸದ ಡಾ.ಜಾಧವ

ಚಿಂಚೋಳಿ,ಜ.7- ತಾಲೂಕಿನ ನಾಗಾಇದ್ಲಾಯಿ ಗ್ರಾಮದ ಹೊಲವೊಂದಲ್ಲಿ ಕೃಷಿ ಇಲಾಖೆ ವತಿಯಿಂದ ಕೈಗೊಂಡ ಹಿಂಗಾರು ಬೆಳೆ ಸವೆ9 ಕ್ಷೇತ್ರ ಸಮೀಕ್ಷೆ ಕಾರ್ಯಕ್ರಮದಲ್ಲಿ ಕಲಬುರಗಿಯ ಲೋಕಸಭೆ ಸದಸ್ಯರಾದ ಡಾ. ಉಮೇಶ ಜಾಧವ ಭೇಟಿ ನೀಡಿ ಬೆಳೆ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ತಾಲೂಕಿನಲ್ಲಿ ಹಿಂಗಾರು ಬೆಳೆ ಸಮೀಕ್ಷೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅನೀಲ ಕುಮಾರ ರಾಠೋಡ. ಚಿಂಚೋಳಿಯ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳಾದ ಪ್ರಕಾಶ ರಾಠೋಡ.ನಾಗಾಇದ್ಲಾಯಿ ಗ್ರಾಮದ ಲೆಕ್ಕಾಧಿಕಾರಿ ಕು. ಸುಮಾ. ಖಾಸಗಿ ಬೆಳೆ ಸವೆ9ದಾರರಾದ ರಾಜು ತಿರುಮಲಾಪುರ. ಚಿಂಚೋಳಿಯ ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಸಂತೋಷ ಗಡಂತಿ. ತಾಲೂಕು ಪಂಚಾಯತ ಸದಸ್ಯರಾದ ಪ್ರೆಮಿಸಿಂಗ್ ಜಾಧವ್. ಬಿಜೆಪಿಯ ಭೀಮಶೆಟ್ಟಿ ಮುರಡಾ. ರಾಜು ಪವಾರ. ಶ್ರೀಮಂತ ಕಟ್ಟಿಮನಿ. ಕೃಷ್ಣಪ್ಪ ಪೂಜಾರಿ ಮಿರಿಯಾಣ. ಶಿವಯೋಗಿ ರುಸ್ತಂಪೂರ. ಅಭೀಷೇಕ ಮಲ್ಕನೊರ್. ಪವನ್ ಕುಮಾರ ಗೋಪನಪಳ್ಳಿ. ಸುಧಾಕರ ಗೌಡ್ಸ್ ಬೈರಂಪಳ್ಳಿ. ಹನುಮಂತ ಗಾರಂಪಳ್ಳಿ. ಲೋಕಸಭಾ ಸದಸ್ಯರು ಮತ್ತು ಶಾಸಕರ ಆಪ್ತ ಕಾರ್ಯದರ್ಶಿಗಳಾದ ಶ್ರೀನಿವಾಸ್ ಚಿಂಚೋಲಿಕರ್. ಮತ್ತು ಅನೇಕ ರೈತರು ಉಪಸ್ಥಿತರಿದ್ದರು.