ಹಾ.ಉ.ಸ.ಸಂಘ- ಅಧ್ಯಕ್ಷರಾಗಿ ಹರೀಶ್ ಆಯ್ಕೆ

ಕೋಲಾರ,ನ.೨೬: ತಾಲೂಕಿನ ಹೆಚ್.ಮಲ್ಲಾಂಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ವಡಗೂರು ಡಿ.ವಿ.ಹರೀಶ್‌ರವರು ಆವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಂದಿನ ೫ ವರ್ಷಗಳ ಆಡಳಿತ ಮಂಡಳಿಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಡಿ.ವಿ.ಹರೀಶ್‌ರವರು ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಟಿ.ನಾಗಭೂಷಣ್‌ಬಾಬು ಆವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ವೈ.ಮುರಳಿಧರ, ಪಾಂಡುರಂಗ, ಮುನಿವೆಂಕಟಪ್ಪ, ಶ್ರೀನಿವಾಸಚಾರ್, ಕೆ.ಸತ್ಯನಾರಾಯಣ್, ಕೆ.ಸುಬ್ರಮಣಿ, ಕಠಾರಿಪಿಳ್ಳಪ್ಪ,ಸುಜಾತಮ್ಮ, ಸಾವಿತ್ರಮ್ಮ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರಾದ ಲಲಿತಮ್ಮಲೋಕೇಶ್, ಗ್ರಾಮದ ಮುಖಂಡರಾದ ತಿರುಪತಣ್ಣ, ನಾರಾಯಣಪ್ಪ, ಜಿ.ಚಲಪತಿ, ರಮೇಶ್, ವೆಂಕಟೇಶಪ್ಪ ಮತ್ತು ಜಗಪ್ಪ ಹಾಗೂ ಮುಖ್ಯಕಾರ್ಯನಿರ್ವಾಹಕ ಆರ್. ಮುರಳಿಧರ್ ಉಪಸ್ಥಿತರಿದ್ದರು.
ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ನೀರಿಕ್ಷಕರಾದ ಅಬೀದ್‌ಹುಸೇನ್ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.