ಹಾಸ್ಯ ಬದುಕಿನ ಸಂಜೀವಿನಿ

ಬೀದರ:ಎ.06: ಒತ್ತಡದ ಬದುಕಿನಲ್ಲಿ ಬಾಳುತ್ತಿರುವ ನಾವಿಂದು ತುಂಬ ಕಷ್ಟ ನಷ್ಟವನ್ನು ಅನುಭವಿಸುತ್ತಿದ್ದೇವೆ. ದುಬಾರಿ ಬೆಲೆಗಳು ಬಡವನಿಗೆ ನುಂಗಲಾರದ ತುತ್ತಾಗಿವೆ. ರೈತರಿಗೆ ಸಕಾಲಿಕ ಮಳೆ ಬೆಳೆಯಾಗದೆ ತೊಂದರೆ ಅನುಭವಿಸುತ್ತಿರುವರು. ಹೀಗೆ ಒಂದಿಲ್ಲೊಂದು ಕಾರಣಗಳಿಂದಾಗಿ ಮನುಷ್ಯನ ಬದುಕು ಕಷ್ಟಮಯವಾಗಿದೆ. ಚಿಂತೆ ಮಯವಾಗಿದೆ ಇಂಥ ಸಂರ್ಭಳದಲ್ಲಿ ಈ ಕಷ್ಟ ನೋವುಗಳ ಸುರಿಮಳೆಯಿಂದಾಗಿ ಮನುಷ್ಯನ ಬದುಕು ಸುಖದಿಂದ ವಂಚಿತ ಗೊಂಡಿದೆ. ಈ ಕಾರಣವಾಗಿ ನಮಗೆ ಒಂದಿಷ್ಟು ನೆಮ್ಮದಿ ಬೇಕಾಗಿದೆ . ಇದಕ್ಕೆಲ್ಲಾ ಹಾಸ್ಯವೇ ಬದುಕಿನ ಸಂಜೀವಿನಿ ಎಂದು ಖ್ಯಾತ ಸಾಹಿತಿ ಡಾ. ಎಂ .ಜಿ .ದೇಶಪಾಂಡೆ ಅವರು ಮಾತನಡಿದರು. ಇವರು ಬೀದರ್ ತಾಲ್ಲೂಕಿನ ಕಾಡವಾದ ಗ್ರಾಮದಲ್ಲಿ ಪ್ರ್ಡಿಸಿದ್ದ ದಿವಂಗತ ಹನುಮಂತಪ್ಪನವರ 43ನೆಯ ಪುಣ್ಯತಿಥಿಯ ಅಂಗವಾಗಿ ಹಮ್ಮಿಕೊಂಡ ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ ಬೀದರ್ ಈ ಸಂಸ್ಥೆಯು ಹಮ್ಮಿಕೊಂಡ” ಹಾಸ್ಯ ಸಂಜೆ ಹಾಗೂ ಪ್ರಶಸ್ತಿ ಪ್ರದಾನ “ಕರ್ಯಾಕ್ರಮದಲ್ಲಿ ಅವರು ಮಾತನಾಡುತ್ತಿದ್ದರು . ಇದೇ ವೇಳೆ ಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಪ್ರಕಾಶ್ ಕುಲಣಿuಟಿಜeಜಿiಟಿeರ್ಜ ಅವರು ಜನರನ್ನುದ್ದೇಶಿಸಿ ಹಾಸ್ಯ ಚಟಾಕಿಗಳನ್ನು ಹೇಳಿ ಎಲ್ಲರಿಗೂ ನಗೆಗಡಲಲ್ಲಿ ತೇಲಿಸಿದರು . ಗುಲ್ರ್ಗಿ ಆಕಾಶವಾಣಿ ಕಲಾವಿದರಾದ ಶ್ರೀ ಕಲ್ಯಾಣ್ ರಾವ ಮರಕುಂದ ಅವರು ಹಾಸ್ಯ ಹೇಳುವುದರೊಂದಿಗೆ ಸುಶ್ರಾವ್ಯವಾದ ಹಾಡುಗಳನ್ನು ಹಾಡಿ ಜನಮನ ತಣಿಸಿದರು. ಈ ವೇಳೆ ಕರ್ಯಗಕ್ರಮದಲ್ಲಿ ಶ್ರೀ ರಾಜ್ಕುಮಾರ್ ಮರಕುಂದಾ ರವರು ಸ್ವಾಗತವನ್ನು ಕೋರಿದರು .ಶ್ರೀ ವಿಜಯಕುಮಾರ್ ಅವರು ಕರ್ಯ ಕ್ರಮವನ್ನು ನಿರೂಪಣೆ ಮಾಡಿದರು. ಈ ಒಂದು ಕರ್ಯ ಕ್ರಮದಲ್ಲಿ ಶಂಭುಲಿಂಗ ಬೋತಗಿ ಸಂಗೀತ ಕಲಾವಿದರು, ಜಗನಾಥ ಯರನಳ್ಳಿ ತಬಲಾ ವಾದಕರು ,ಸುಧಾ ಸುತಾರ್, ಇಂದುಮತಿ ಮರಕುಂದಾ, ಈಶ್ವರಮ್ಮ ಮಂಗಲಗಿ ,ತೇಜಮ್ಮ ಬರೂರ್, ಲಲಿತಮ್ಮ ಉಪಾದಿ, ಚಂದ್ರಮ್ಮ ತೂಗಾಂವ ,ನಾಗಮ್ಮ ಐನಾಪುರ್, ಸುಬ್ಬಮ್ಮ ಕಲ್ಯಾಣ್ ರಾವ್, ಮಲ್ಲಿಕಜುuಟಿಜeಜಿiಟಿeರ್ಜನ ಮಂಗಲಗಿ, ಶಿವರಾಜ್ ಮರಕುಂದಾ, ಓಂಯ್ಯ ಸ್ವಾಮಿ ಮಠಪತಿ, ಕಾಶಿನಾಥ್ ಹಡಪದ್ ಹೀಗೆ ಗ್ರಾಮದ ಮುಖ್ಯಸ್ಥರು ಸೇರಿದಂತೆ ನೂರಾರು ಗ್ರಾಮೀಣ ಜನರು ಕರ್ಯಕಕ್ರಮದಲ್ಲಿ ಪಾಲ್ಗೊಂಡಿದ್ದರು ಭೀಮಶಾ ಯದಲಾಪೂರ ಕರ್ಯರಕ್ರಮಕ್ಕೆ ಅಭಿನಂದಿಸಿದರು .