ಹಾಸ್ಟ್ಟೆಲ್‍ಗಳಲ್ಲಿ ಕುಡಿಯುವ ನೀರು ಸ್ವಚ್ಫತೆ, ಶುದ್ಧಗಾಳಿ ಆದ್ಯತೆ ನೀಡಬೇಕು: ಅಪರ್ಣಾ ಕೊಳ್ಳಾ

ಕಲಬುರಗಿ:ಜೂ. 26: ಕುಡಿಯುವ ನೀರು, ಸ್ವಚ್ಪತೆ, ಶುದ್ಧಗಾಳಿ ಇರುವಂತಹ ಹಾಸ್ಟೆಲ್‍ಗಳಲ್ಲಿರುವ ಪ್ರತಿಯೊಂದು ಮಕ್ಕಳಿಗೆ ಹಾಸಿಗೆ, ಬೆಡ್ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಸರಿಯಾಗಿ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರಾದ ಅಪರ್ಣಾ ಎಮ್. ಕೊಳ್ಳಾ ಅವರು ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ಪೊಲೀಸ್ ಇಲಾಖೆ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕಲಬುರಗಿ ವಿವಿಧ ಇಲಾಖೆಗಳ ಮತ್ತು ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರಾದ ಅಪರ್ಣಾ ಎಮ್. ಕೊಳ್ಳಾ ಇವರ ಅಧ್ಯಕ್ಷತೆಯಲ್ಲಿ ಮಕ್ಕಳ ರಕ್ಷಣ ವ್ಯವಸ್ಥೆಯ ಕುರಿತು ಭಾಗಿದಾರದೊಂದಿಗೆ ಸಮಾಲೋಚನೆ ಸಭೆ/ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೂಂದಿಗೆ ಹಾಗೂ ಮಕ್ಕಳ ಪಾಲನಾ ಸಂಸ್ಥೆ, ಸ್ವಯಂ ಸೇವೆ ಸಂಸ್ಥೆಗಳ ಮುಖ್ಯಸ್ಥರುಗಳ ಮಕ್ಕಳ ರಕ್ಷಣಾ ವ್ಯವಸ್ಥೆಯ ಕುರಿತು ಸಮಾಲೋಚನಾ ಸಭೆ ನಡೆಸಿದರು.
ಮಕ್ಕಳಿಗೆ ವಿತರಿಸುತ್ತಿರುವ ಕಿಟ್ಟುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.ಕಿತ್ತೂರು ರಾಣೆ ಚೆನ್ನಮ್ಮ ವಸತಿಶಾಲೆ ಕೊಡ್ಲಾ ಸೇಡಂ ಇಲ್ಲಿ ನಡೆದ ಮಕ್ಕಳ ಆಸ್ಪಸ್ಥತೆಗೆ ಕಾರಣದ ಬಗ್ಗೆ ಮಾಹಿತಿ ಪಡೆದುಕೊಂಡರು. ಆರೋಗ್ಯದ ಬಗ್ಗೆ ಹಾಗೂ ಮಕ್ಕಳ ರಕ್ಷಣೆಯ ಬಗ್ಗೆ ಹೆಚ್ದಿನ ಕಾಳಜಿ ವಹಿಸಲು ಎಲ್ಲ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯಾದರ್ಶಿ ಮಹಮ್ಮದ್ ಅನ್ವರ್ ಹುಸೇನ್ ಮೊಗಲಾನಿ ಅವರು ಮಾತನಾಡಿ,ಹಾಸ್ಟಲ್‍ಗಳಲ್ಲಿರುವ ಪ್ರತಿಯೊಂದು ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ.ಮಕ್ಕಳಿಗೆ ಸರಿಯಾಗಿ ಊಟ ವ್ಯವಸ್ಥೆ, ಕುಡಿಯುವ ನೀರಿನ ಇನ್ನೀತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಅಧಿಕಾರಿಗೆ ತಾಖೀತು ಮಾಡಿದರು.
ನಾನು ನಿನ್ನೆ ಕೆಲವೊಂದು ತಾಲೂಕಾ ಹಾಸ್ಟೆಲ್‍ಗಳಿಗೆ ಭೇಟಿ ನೀಡಿದಾಗ ಅನೇಕ ಸಮಸ್ಯೆಗಳು ಕಂಡು ಬಂದಿವೆ ಅಧಿಕಾರಿಗಳು ವಾರ್ಡನ್‍ಗಳು, ಇರುವುದಿಲ್ಲ ವಿದ್ಯಾರ್ಥಿಗಳಿಗೆ ಸರಿಯಾದ ಎಲ್ಲಾ ರೀತಿಯಾದ ಸೌಲಭ್ಯಗಳನ್ನು ಒದಗಿಸಬೇಕೆಂದರು.
ತಾಯಿಂದಿರ ಮರಣ ಪ್ರಮಾಣದ ಬಗ್ಗೆ ಹಾಗೂ ಶಿಶುಗಳ ಮರಣ ಮಾಹಿತಿ ಪಡೆದÀರು. ಜಿಮ್ಸ್ ಆಸ್ಪತ್ರೆಗೆ ನಿನ್ನೆ ಭೇಟಿ ನೀಡಿದೆ. ಅಲ್ಲಿ ಒಂದು ಮಗುವನ್ನು ನೋಡಿದೆ ಮಗುವಿನ ಹತ್ತಿರ ಒಬ್ಬರ ಸಹ ಇರಲ್ಲಿಲ್ಲ ಅಧಿಕಾರಿಗಳು ಕ್ರಮವಹಿಸಬೇಕೆಂದು ಡಿ.ಹೆಚ್.ಓ. ಡಾ. ರಾಜಶೇಖರ ಮಾಲಿ ಅವರಿಗೆ ತರಾಟೆ ತೆಗೆದುಕೊಂಡರು.
ಅಪರ ಜಿಲ್ಲಾಧಿಕಾರಿ ಎಂ.ರಾಚಪ್ಪ ಅವರು ಮಾತನಾಡಿ, ತಮ್ಮ ಇಲಾಖೆಗೆ ಸಂಬಂಧಪಟ್ಟ ಮಾಹಿತಿಯನ್ನು ಕ್ರೋಢಿಕರಿಸಿ ಮುಂದಿನ ಸಭೆಯಲ್ಲಿ ತರಬೇಕೆಂದರು. ಮುಂದಿನ ದಿನಗಳಲ್ಲಿ ತಮಗೆ ನೀಡಿದ ಕೆಲಸ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕೆಂದರು.

2023-24 ನೇ ಸಾಲಿನ ಬಾಲ್ಯವಿವಾಹ ಪ್ರಕರಣ ಸಂಖ್ಯೆ ಎಷ್ಟು ಇವೆ ಎಂದು ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನಿಸಿದರು.ಬಾಲ್ಯ ವಿವಾಹದ ಪ್ರಕರಣ ಇಲ್ಲಿಯವರೆಗೆ 150 ಪಕ್ರರಣ ಬಂದಿವೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾರ್ಜಶಿಟ್ಟಗಳು ಕೋರ್ಟಿಗಳಿಗೆ ಕÀಳುಹಿಸಲಾಗಿದೆ. ಪೋಕ್ಸೊ ಕಾಯ್ದಿಯಡಿ ಅನೇಕ ಕೇಸ್‍ಗಳು ಬಂದರೆ ಅವುಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಮಕ್ಕಳು ಇತ್ತೀಚಿನ ದಿನಗಳ ಮೊಬೈಲ್ ನೋಡಿಕೊಂಡು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಇವುಗಳನ್ನು ಅಧಿಕಾರಿಗಳು ಕಡಿವಾಣ ಹಾಕಬೇಕೆಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಅವರು ಮಾತನಾಡಿ ಬಾಲಕಾರ್ಮಿಕ ಪದ್ಧತಿ ಬಗ್ಗೆ ವಿವರಿಸಿದರು. ಬಾಲಕಾರ್ಮಿಕರನ್ನು ಇಲ್ಲಿಯವರೆಗೆ ಎಷ್ಟು ಜನ ಪತ್ತೆ ಹಚ್ಚಿದ್ದೀರಿ ಎಂದು ಪ್ರಶ್ನಿಸಿದರು. ಯಾರು ಬಾಲಕಾರ್ಮಿಕರನ್ನು ಸಿಕ್ಕಿರುವುದಿಲ್ಲ ಎಂದು ಹೇಳಿದರು. ನಾನು ಕೆಲವೊಂದು ಕಡೆ ನೋಡಿದರೆ ಬಾಲಕಾರ್ಮಿಕರನ್ನು ಇನ್ನೂ ದುಡಿಯುತ್ತಿದ್ದಾರೆ ಅಂತಹವರನ್ನು ಗುರುತಿಸಿ ಶಾಲೆಗಳಿಗೆ ಸೇರಿಸಬೇಕೆಂದು ಅವರು ಹೇಳಿದರು. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ,ಪೋಲಿಸ ಇಲಾಖೆ, ಸಂಘ ಸಂಸ್ಥೆಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ ಯು, ಜಿಲ್ಲಾ ಮಕ್ಕಳ ರಕ್ಷಣ ಘಟಕ ಅಧಿಕಾರಿ ವಿ. ಮಂಜುಳಾ ಪಾಟೀಲ, ಲೀಗಲ್ ಕಂ-ಪ್ರೊಬೇಶನ್ ಅಧಿಕಾರಿ ಭರತೇಶ ಶೀಲವಂತರ್  ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳು ಉಪಸ್ಥಿತರಿದ್ದರು.